ADVERTISEMENT

ರಸಗೊಬ್ಬರಕ್ಕೆ ಇಲ್ಲ ಕೊರತೆ: ರವಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:51 IST
Last Updated 30 ಜುಲೈ 2025, 7:51 IST
ಕೆ.ಎಚ್.ರವಿ  
ಕೆ.ಎಚ್.ರವಿ     

ಮೈಸೂರು: ‘ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ರೈತರು ಆತಂಕ ಪಡಬೇಕಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ರವಿ ತಿಳಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನಿದೆ. ರೈತರು ಅನಗತ್ಯವಾಗಿ ಆತಂಕ ಪಡುವುದು ಬೇಡ. ಕಳೆದ ಏಪ್ರಿಲ್‌ನಿಂದ ಜುಲೈ ಅಂತ್ಯದವರಗೆ 59,173 ಮೆಟ್ರಿಕ್ ಟನ್ ಅವಶ್ಯಕತೆ ಇತ್ತು. ಅವಧಿಗಿಂತಲೂ ಮೊದಲು ಮುಂಗಾರು ಆರಂಭ ಹಾಗೂ ಬಿತ್ತನೆ ಪ್ರದೇಶ ಹೆಚ್ಚಳದಿಂದ 91,508 ಮೆಟ್ರಿಕ್ ಟನ್ ಗೊಬ್ಬರ ಮಾರಾಟವಾಗಿದೆ’ ಎಂದರು. 

‘ಆಗಸ್ಟ್‌ನಲ್ಲಿ 16,550 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ನಮ್ಮಲ್ಲಿ ಈಗಾಗಲೇ 30,450 ಮೆಟ್ರಿಕ್ ಟನ್‌ ದಾಸ್ತಾನಿದೆ. ಮುಂಬರುವ ಭತ್ತದ ನಾಟಿಗೆ ಯಾವುದೇ ಗೊಬ್ಬರದ ಅಭಾವ ಆಗುವುದಿಲ್ಲ’ ಎಂದು ಹೇಳಿದರು. 

ADVERTISEMENT

‘ಭತ್ತದ ನಾಟಿಗೆ ಯೂರಿಯಾವನ್ನು ಹೆಚ್ಚು ಬಳಸಬಾರದು. ಕೃತಕ ಅಭಾವ ಸೃಷ್ಟಿ ಮಾಡುವಂತಹ ಘಟನೆ ಕಂಡು ಬಂದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರ ಪರವಾನಗಿ ರದ್ದು ಮಾಡಲಾಗುವುದು. ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.