ADVERTISEMENT

ಶೆಟ್ಟಹಳ್ಳಿ | ಹುಲಿ ದಾಳಿಗೆ ಹಸು ಸಾವು; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 4:09 IST
Last Updated 9 ಸೆಪ್ಟೆಂಬರ್ 2025, 4:09 IST
<div class="paragraphs"><p>ಹುಲಿ – ಸಂಗ್ರಹ ಚಿತ್ರ</p></div>

ಹುಲಿ – ಸಂಗ್ರಹ ಚಿತ್ರ

   

ಹುಣಸೂರು: ನಾಗರಹೊಳೆ ಅರಣ್ಯದಂಚಿಗೆ ಹೊಂದಿಕೊಂಡಿರುವ ಶೆಟ್ಟಹಳ್ಳಿಯ ಹೊಲದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಸೋಮವಾರ ಹುಲಿ ದಾಳಿ ನಡೆಸಿದ ಪರಿಣಾಮ ಹಸು ಮೃತಪಟ್ಟಿದೆ.

ಸಿಂಡೇನಹಳ್ಳಿಯ ಈಶ್ವರೇಗೌಡರಿಗೆ ಸೇರಿದ ಹಸು ಮೇಲೆ ಹುಲಿ ದಾಳಿ ನಡೆಸಿದೆ. ಕಳೆದ ನಾಲ್ಕು ದಿನದ ಹಿಂದೆ ಮುತ್ತುರಾಯನಹೊಸಹಳ್ಳಿಯಲ್ಲಿ ದಾಳಿ ಮಾಡಿತ್ತು. ವಾರದಲ್ಲಿ ಎರಡು ಹಸುಗಳು ಹುಲಿ ದಾಳಿಗೆ ಮೃತಪಟ್ಟಿವೆ. ಇದರಿಂದ  ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿ ಮಹಜರ್‌ ಮಾಡಿದರು

ADVERTISEMENT

ನಾಗರಹೊಳೆ ಅರಣ್ಯದಂಚಿನಲ್ಲಿ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹುಲಿ ಹಾವಳಿ ಹೆಚ್ಚಿದ್ದು, ಹಗಲು ಜೀವನ ನಡೆಸುವುದು ಕಷ್ಟವಾಗಿದೆ. ಹುಲಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೊಲ ತೋಟಗಳಿಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿ, ಹುಲಿ ಸೆರೆಗೆ ಇಲಾಖೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.