
ಹುಲಿ ದಾಳಿಗೆ ಮೃತಪಟ್ಟ ದಂಡನಾಯಕ
ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಹುಲಿ ದಾಳಿಗೆ ರೈತ ದಂಡನಾಯಕ ಬಲಿಯಾಗಿದ್ದು, ಸ್ಥಳಕ್ಕಾಗಮಿಸಿದ ಮಲೆಯೂರು ಆರ್‌ಎಫ್‌ಒ ಅಮೃತಾ ಅವರ ಮೇಲೆ ಮೃತ ವ್ಯಕ್ತಿಯ ಕುಟುಂಬದ ಮಹಿಳೆಯರು ಹಲ್ಲೆ ನಡೆಸಿದ್ದಾರೆ.
'ದಂಡನಾಯಕ ಶುಕ್ರವಾರ ಬೆಳಿಗ್ಗೆ ತನ್ನ ಜಮೀನಿಗೆ ತೆರಳಿ ಎತ್ತುಗಳ ಮೂಲಕ ಹೊಲ ಉಳುತ್ತಿದ್ದಾಗ ಹುಲಿ ದಾಳಿ ಮಾಡಿತ್ತು. ಜಮೀನು ಮಲೆಯೂರು ಅರಣ್ಯ ಪ್ರದೇಶದ ಹತ್ತಿರವೇ ಇರುವ ಕಾರಣ ಅಮೃತಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಮಹಿಳೆಯರು ಅಧಿಕಾರಿ ಹಾಗೂ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.
'ತಕ್ಷಣವೇ ಸರಗೂರು ಠಾಣಾ ಪೊಲೀಸರು ಅಮೃತಾ ಅವರಿಗೆ ರಕ್ಷಣೆ ನೀಡಿ ಅಲ್ಲಿಂದ ಕರೆದೊಯ್ದಿದ್ದಾರೆ' ಎನ್ನಲಾಗಿದೆ.
'ಪದೇ ಪದೇ ಹುಲಿ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿ ಹುಲಿ ಹೆಜ್ಜೆ ಇರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಬೋನು ಇಟ್ಟಿಲ್ಲ' ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.