ADVERTISEMENT

ಹುಣಸೂರು: ನಾಗಮಂಗಲ ಗ್ರಾಮದ ಬಳಿ ಹುಲಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 4:01 IST
Last Updated 21 ಜೂನ್ 2021, 4:01 IST
ಶೋಭಾ ಹರೀಶ್ ಅವರ ಜಮೀನಿನಲ್ಲಿ ಭಾನುವಾರ ಕಾಣಿಸಿಕೊಂಡ ಹುಲಿಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ
ಶೋಭಾ ಹರೀಶ್ ಅವರ ಜಮೀನಿನಲ್ಲಿ ಭಾನುವಾರ ಕಾಣಿಸಿಕೊಂಡ ಹುಲಿಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ   

ಹುಣಸೂರು: ತಾಲ್ಲೂಕಿನ ನಾಗಮಂಗಲ ಗ್ರಾಮಕ್ಕೆ ಹೊಂದಿಕೊಂಡಿರುವ ಮಯತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯದಿಂದ ಹೊರ ಬಂದ ಹುಲಿಯೊಂದು ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿ ದೇವರಾಜ್ ತಿಳಿಸಿದ್ದಾರೆ.

ಶೋಭಾ ಹರೀಶ್ ಅವರಿಗೆ ಸೇರಿದ ಹೊಲದಲ್ಲಿ ಉಳುಮೆ ಮಾಡಲು ತೆರಳಿದವರಿಗೆ ಜಮೀನಿಗೆ ಹೊಂದಿಕೊಂಡಿರುವ ಅರಣ್ಯದಂಚಿನಲ್ಲಿ ಹುಲಿ ಮಲಗಿರುವುದು ಗೋಚರಿಸಿದೆ ಎಂದು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ಹುಲಿ ದಾಳಿಗೆ ಗೋವಿಂದ ಮತ್ತು ಸ್ವಾಮಿ ಅವರಿಗೆ ಸೇರಿದ ಹಸು ಬಲಿಯಾಗಿದ್ದು, ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಹುಲಿ ದಾಳಿಗೆ ಬಲಿಯಾದ ಹಸುವಿಗೆ ಇಲಾಖೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ

ADVERTISEMENT

ಅರಣ್ಯದಂಚಿನಲ್ಲಿ ಕಾಣಿಸಿದ ಹುಲಿ ಸೆರೆಗೆ ಬೋನು ಇಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.