ADVERTISEMENT

ಬೂದಿತಿಟ್ಟು: ಹುಲಿ ಹೆಜ್ಜೆ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:01 IST
Last Updated 12 ಜುಲೈ 2021, 5:01 IST
ಬೂದಿತಿಟ್ಟು ಗ್ರಾಮದಲ್ಲಿ ಭಾನುವಾರ ಕಂಡು ಬಂದ ಹುಲಿಯ ಹೆಜ್ಜೆ
ಬೂದಿತಿಟ್ಟು ಗ್ರಾಮದಲ್ಲಿ ಭಾನುವಾರ ಕಂಡು ಬಂದ ಹುಲಿಯ ಹೆಜ್ಜೆ   

ಪಿರಿಯಾಪಟ್ಟಣ: ಕಾಡಂಚಿನ ಗ್ರಾಮವಾದ ಬೂದಿತಿಟ್ಟು ಗ್ರಾಮದ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆ ಹುಲಿ ಸಂಚರಿಸಿದ ಕುರುಹು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಭಯವುಂಟು ಮಾಡಿದೆ.

ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಲಕ್ಷ್ಮೀಪುರ, ಹಬಟೂರು, ಬೂದಿತಿಟ್ಟು ಗ್ರಾಮಗಳಲ್ಲಿ ಹುಲಿಯು ಸಂಚರಿಸುತ್ತಿದ್ದು ಭಾನುವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಗ್ರಾಮದಲ್ಲಿ ಮತ್ತು 11 ಗಂಟೆ ಸಮಯದಲ್ಲಿ ಗ್ರಾಮದ ಹೊರವಲಯದಲ್ಲಿರುವ ಶಾಲೆಯೊಂದರ ಬಳಿ ಜನರಿಗೆ ಕಾಣಿಸಿಕೊಂಡಿದೆ.

ನಾಗರಹೊಳೆ ಆನೆಚೌಕೂರು ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಹುಲಿಯ ಜಾಡು ಪತ್ತೆ ಹಚ್ಚಲು ಭಾನುವಾರ ಯತ್ನಿಸಿದ್ದು ಸೋಮವಾರ ಕ್ಯಾಮೆರಾ ಅಳವಡಿಸುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.