ADVERTISEMENT

ಮೈಸೂರು | ತರಕಾರಿ ಮಾರುಕಟ್ಟೆಯ ಸಮಯ‌ ಬದಲು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 9:31 IST
Last Updated 25 ಮಾರ್ಚ್ 2020, 9:31 IST
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ನಡೆಯಿತು (ಚಿತ್ರ: ಪ್ರಜಾವಾಣಿ ಸಂಗ್ರಹ)
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ನಡೆಯಿತು (ಚಿತ್ರ: ಪ್ರಜಾವಾಣಿ ಸಂಗ್ರಹ)   

ಮೈಸೂರು: ಕೊರೊನಾ ವೈರಸ್ ಹರಡುವಿಕೆ ತಡೆಗಾಗಿ ಇಲ್ಲಿನ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಗೆ ಸಮಯದ ಮಿತಿ ಹೇರಲಾಗಿದೆ.

ಮುಂಜಾನೆಯ 4.30 ರಿಂದ ಬೆಳಿಗ್ಗೆ‌ 8.30ರವರೆಗೆ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ನಿತ್ಯ‌ ನೂರಾರು ಮಂದಿ‌ ಸೇರುತ್ತಿದ್ದರು. ಕೊರೊನಾ‌ ಸೋಂಕು ಹರಡಬಹುದಾದ ಸಾಧ್ಯತೆ ಇರುವುದರಿಂದ ಮಾರಾಟದ ಸಮಯವನ್ನು ಕಡಿತಗೊಳಿಸಲಾಗಿದೆ. 8.30ರ ನಂತರವೂ ಇದ್ದ ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಬುಧವಾರ ಪೊಲೀಸರು ಚದುರಿಸಿದರು.

ಪಾಲಿಕೆಯ ಆರೋಗ್ಯ ವಿಭಾಗದ ತಂಡವು ಹೋಂ ಕ್ವಾರೆಟೈನ್ ಗೆ ಒಳಗಾದವರ ಮನೆಗೆ ನಿತ್ಯ ಭೇಟಿ‌ ನೀಡುವ ಮೂಲಕ ನಿಗಾ ವಹಿಸಿದೆ.ನಗರದಲ್ಲಿ ಜನರ ಓಡಾಟವನ್ನು ಪೊಲೀಸರು ಎಚ್ಚರಿಕೆ ನೀಡುವ ಮೂಲಕ ನಿರ್ಬಂಧಿಸುತ್ತಿದ್ದಾರೆ. ಸೂಪರ್ ಮಾರ್ಕೆಟ್ ಗಳಲ್ಲಿ ಗ್ರಾಹಕರು ಅಂತರ ಕಾಯ್ದಕೊಳ್ಳುವಂತೆ ಸೂಚನೆ ನೀಡಲಾಗಿದೆ.

ADVERTISEMENT

ತಿ.ನರಸೀಪುರದ ಕಾವೇರಿ ನದಿಯಲ್ಲಿ ಯುಗಾದಿಪ್ರಯುಕ್ತ ಪವಿತ್ರ ಸ್ನಾನ ಮಾಡುವ ವಾಡಿಕೆ ಇದೆ. ಇದನ್ನು ತಡೆಯಲು ಪೊಲೀಸರು ಕಣ್ಗಾವಲು ಇರಿಸಿದ್ದು, ನದಿ ತೀರಕ್ಕೆ ಯಾರನ್ನೂ ಬಿಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.