ADVERTISEMENT

ಸ್ಥಳಕ್ಕೆ ಬಾರದ ಸರ್ವೆ, ಕಂದಾಯ ಅಧಿಕಾರಿಗಳು: ಗಿರಿಜನರ ಪ್ರತಿಭಟನೆ

ವಾಸದ ಗುರುತು ಪತ್ತೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:58 IST
Last Updated 19 ಮಾರ್ಚ್ 2022, 2:58 IST
ಎಚ್.ಡಿ.ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿ ಬಳಿ ಗಿರಿಜನರು ಪ್ರತಿಭಟನೆ ನಡೆಸಿದರು
ಎಚ್.ಡಿ.ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿ ಬಳಿ ಗಿರಿಜನರು ಪ್ರತಿಭಟನೆ ನಡೆಸಿದರು   

ಎಚ್.ಡಿ.ಕೋಟೆ: ತಾಲ್ಲೂಕಿನ ನಂಜನಾಯಕನಹಳ್ಳಿ ಬಳಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಅರಣ್ಯದೊಳಗೆ ವಾಸದ ಗುರುತು ಪತ್ತೆ ಮಾಡಲು ಬಾರದ ಸರ್ವೆ ಅಧಿಕಾರಿಗಳ ವಿರುದ್ಧ ಆದಿವಾಸಿ ಗಿರಿಜನರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಸವನಗಿರಿ ಹಾಡಿಯ ಗಿರಿಜನ ಮುಖಂಡ ಬಿ.ಎಂ.ನಟರಾಜು ಮಾತನಾಡಿ, ‘ಮಾರ್ಚ್‌ 7ರಂದು ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಭಾನಗರ ಹಾಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಗ್ರಾಮ ಸಭೆ ನಡೆಸಲಾಗಿತ್ತು. ಮಾರ್ಚ್ 18ರಂದುಕಾಡಿನೊಳಗೆ ಗುರುತು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಡಿಆರ್‌ಎಫ್ಒ ಸಚಿನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಬಂದಿದ್ದಾರೆ. ಕಂದಾಯ ಮತ್ತು ಸರ್ವೆ ಅಧಿಕಾರಿಗಳು ಬಂದಿಲ್ಲ’ ಎಂದು ದೂರಿದರು.

ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿ ಮಹೇಶ್, ‘ಮಾರ್ಚ್ 21 ಮತ್ತು 23ರಂದು ಸರ್ವೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಬಳಿಕ, ಗಿರಿಜನರು ಪ್ರತಿಭಟನೆಯನ್ನು ಹಿಂಪಡೆದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಜು, ಗ್ರಾ.ಪಂ ಸದಸ್ಯ ರಾಜು, ಯಡತೊರೆ ಮಹೇಶ್, ಮುಖಂಡರಾದ ರವಿ, ಸಣ್ಣ, ಕೆಂಪ, ಕಾಳ, ಸೀತ, ಕೆಂಚಮ್ಮ, ಪ್ರಭನಗರ ಹಾಡಿ, ಕೆ.ಯಡತೊರೆ ಹನುಮಂತನಗರ ಹಾಡಿ ಮತ್ತು ಅಣ್ಣೂರು ಹಾಡಿ ಜನರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.