ADVERTISEMENT

ಖಾಸಗಿಯಿಂದ ವಿಮಾ ಪ್ರತಿನಿಧಿಗಳಿಗೆ ತೊಂದರೆ

ಜೀವ ವಿಮಾ ಪ್ರತಿನಿಧಿಗಳ  ವಿಭಾಗೀಯ ಸಮ್ಮೇಳನ: ರಾಷ್ಟೀಯ ಸಮಿತಿ ಅಧ್ಯಕ್ಷ ಎಲ್.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 3:20 IST
Last Updated 6 ಆಗಸ್ಟ್ 2025, 3:20 IST
ನಂಜನಗೂಡಿನ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಮಂಗಳವಾರ ನಡೆದ  ಜೀವ ವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಸಮ್ಮೇಳನ ಹಾಗೂ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜೀವ ವಿಮಾ ನಿಗಮದ ಪ್ರತಿನಿಧಿಗಳ ರಾಷ್ಟೀಯ ಸಮಿತಿ ಅಧ್ಯಕ್ಷ ಎಲ್.ಮಂಜುನಾಥ್  ಉದ್ಘಾಟಿಸಿದರು.
ನಂಜನಗೂಡಿನ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಮಂಗಳವಾರ ನಡೆದ  ಜೀವ ವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಸಮ್ಮೇಳನ ಹಾಗೂ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜೀವ ವಿಮಾ ನಿಗಮದ ಪ್ರತಿನಿಧಿಗಳ ರಾಷ್ಟೀಯ ಸಮಿತಿ ಅಧ್ಯಕ್ಷ ಎಲ್.ಮಂಜುನಾಥ್  ಉದ್ಘಾಟಿಸಿದರು.   

ನಂಜನಗೂಡು: ‘ಜೀವ ವಿಮಾ ಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಈಡೇರಿಕೆಗಾಗಿ ಪ್ರತಿನಿಧಿಗಳು ಸಂಘಟಿತರಾಗಬೇಕು, ಅಗತ್ಯಬಿದ್ದರೆ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಜೀವ ವಿಮಾ ನಿಗಮದ ಪ್ರತಿನಿಧಿಗಳ ರಾಷ್ಟೀಯ ಸಮಿತಿ ಅಧ್ಯಕ್ಷ ಎಲ್.ಮಂಜುನಾಥ್ ಹೇಳಿದರು.

ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಮಂಗಳವಾರ ನಡೆದ ಜೀವ ವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಸಮ್ಮೇಳನ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿಮಾ ಕ್ಷೇತ್ರಕ್ಕೆ ಹೆಚ್ಚಾಗಿ ಖಾಸಗಿ ಸಂಸ್ಥೆಗಳು ಕಾಲಿಟ್ಟಿರುವುದರಿಂದ ಜೀವ ವಿಮಾ ಪ್ರತಿನಿಧಿಗಳು ತೀವ್ರ ಪೈಪೋಟಿ ಎದುರಿಸಬೇಕಾಗಿದೆ, ಸಂಸ್ಥೆ ಹಲವು ಉತ್ತಮ ಪಾಲಿಸಿಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಪ್ರತಿನಿಧಿಗಳಿಗೆ ದೊರೆಯುತ್ತಿದ್ದ ಹಲವು ಸೌಲಭ್ಯ ಹಾಗೂ ಕಮಿಷನ್‌ನಲ್ಲಿ ಕಡಿತ ಮಾಡುತ್ತಿರುವುದರಿಂದ ಪ್ರತಿನಿಧಿಗಳು ತೊಂದರೆಗೆ ಸಿಲುಕುತ್ತಿದ್ದಾರೆ, ಪ್ರತಿನಿಧಿಗಳ ಸಂಘ ನಮ್ಮ ಸದಸ್ಯರಿಗೆ ನ್ಯಾಯವಾಗಿ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಆಡಳಿತ ಮಂಡಳಿಯೊಡನೆ ಸಂಘರ್ಷ ನಡೆಸುತ್ತಿದೆ, ಪ್ರತಿನಿಧಿಗಳ ಹಿತ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ ಜೀವ ವಿಮಾ ಪ್ರತಿನಿಧಿಗಳ ತಾಲ್ಲೂಕು ಅಧ್ಯಕ್ಷರಾಗಿ ಎನ್.ರವಿ, ಗೌರವ ಅಧ್ಯಕ್ಷರಾಗಿ ಎನ್.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ.ಪ್ರಕಾಶ್, ಖಜಾಂಜಿಯಾಗಿ ಪಿ.ಚಂದ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಟಿ.ಎಸ್, ಸಿದ್ದಲಿಂಗ ಒಡೆಯರ್‍,ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎನ್. ರವಿ, ರಾಜ್ಯ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ, ಬಿ.ಸಿ,ಗುರುಪಾದಸ್ವಾಮಿ, ಜಯರಾಮು, ಮೈಸೂರು ವಿಭಾಗದ ವಿಮಾ ನೌಕರರ ಸಂಘದ ಅಧ್ಯಕ್ಷ ರಾಮು, ಯೋಗೇಶ್, ಶಿವರುದ್ರಮ್ಮ, ನಂಜನಗೂಡು ಶಾಖಾಧಿಕಾರಿ ಎಸ್,ರಾಮಸ್ವಾಮಿ, ಬಿ,ಎಸ್,ಅರವಿಂದ್ ಕುಮಾರ್, ಕೃಷ್ಣಭಟ್, ಗುಂಡ್ಲುಪೇಟೆ ಶಾಖೆ ಅಧ್ಯಕ್ಷ ನಾಗರಾಜು, ಎಂ.ಪಿ. ಪ್ರಕಾಶ್, ಚಂದ್ರ ಪಿ, ಗುರುಪ್ರಸಾದ್, ಭಾವನಾ, ಬಿ.ಎಲ್.ನಾಗೇಂದ್ರ, ಬಿಳಿಗೆರೆ ನಾಗೇಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.