ADVERTISEMENT

ಬಹುರೂಪಿ ರಂಗೋತ್ಸವಕ್ಕೆ ‘ವೃಕ್ಷಮಾತೆ’ ತುಳಸೀಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 13:49 IST
Last Updated 12 ಮಾರ್ಚ್ 2022, 13:49 IST
ಮಗುವನ್ನು ತೊಟ್ಟಿಲಲ್ಲಿ ಇರಿಸಿ ತೂಗುವ ಮೂಲಕ ಬಹುರೂಪಿ ಉತ್ಸವಕ್ಕೆ ಮೈಸೂರಿನ ರಂಗಾಯಣದಲ್ಲಿ ಶನಿವಾರ ಚಾಲನೆ ನೀಡಲಾಯಿತು
ಮಗುವನ್ನು ತೊಟ್ಟಿಲಲ್ಲಿ ಇರಿಸಿ ತೂಗುವ ಮೂಲಕ ಬಹುರೂಪಿ ಉತ್ಸವಕ್ಕೆ ಮೈಸೂರಿನ ರಂಗಾಯಣದಲ್ಲಿ ಶನಿವಾರ ಚಾಲನೆ ನೀಡಲಾಯಿತು   

ಮೈಸೂರು: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಗಪ್ರೇಮಿಗಳಿಗೆ ರಸದೌತಣ ಉಣಬಡಿಸಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಶನಿವಾರ ಸಂಜೆ ಇಲ್ಲಿ ‘ವೃಕ್ಷಮಾತೆ’ ತುಳಸೀಗೌಡ ಚಾಲನೆ ನೀಡಿದರು.

ಒಂಬತ್ತು ದಿನಗಳ ಉತ್ಸವ ನಡೆಯಲಿದ್ದು, ಮೈಸೂರು ರಂಗಾಯಣದಲ್ಲಿ ಕಲಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ.‌ ನಿತ್ಯ ನಾಟಕ, ಚಲನಚಿತ್ರೋತ್ಸವ, ಸಂಗೀತ ಮೇಲೈಸಲಿವೆ. ವಿವಿಧ ಭಾಷೆಗಳ ನಾಟಕಗಳು, ರಾಜ್ಯ ಹಾಗೂ ಹೊರರಾಜ್ಯದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದೆ.

‘ತಾಯಿ’ ವಿಷಯ ಪ್ರಧಾನವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಎಲ್ಲ ಸಿದ್ಧತೆಗಳನ್ನೂ ‘ತಾಯಿ’ ಪರಿಕಲ್ಪನೆಯಲ್ಲೇ ಮಾಡಲಾಗಿದೆ. ‘ಜಮೀನು–ಜಲ–ಜಂಗಲ್‌–ಜಾನುವಾರು–ಜನ’ ಪಂಚಸೂತ್ರದಡಿ ತಾಯಿ ಮತ್ತು ತಾಯ್ತನ ನೋಡುವ ಪ್ರಯತ್ನ ನಡೆದಿದೆ.

ಆಹಾರ ಮಳಿಗೆ ಸೇರಿದಂತೆ ಒಟ್ಟು 80 ಮಳಿಗೆ ಹಾಕಲಾಗಿದೆ. ಗುಡಿಕೈಗಾರಿಕೆ, ಕುಂಬಾರಿಕೆ ಮತ್ತು ನೇಕಾರಿಕೆ ಬಗ್ಗೆ ಮಾಹಿತಿ ಒದಗಿಸುವ ಐದು ಪ್ರಾತ್ಯಕ್ಷಿಕೆ ಮಳಿಗೆಗಳನ್ನು ತೆರೆಯಲಾಗಿದೆ.

ADVERTISEMENT

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ನಟಿ ಮಾಳವಿಕಾ ಅವಿನಾಶ್, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.