ADVERTISEMENT

ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ

ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:05 IST
Last Updated 11 ಡಿಸೆಂಬರ್ 2023, 14:05 IST
ಎಚ್.ಡಿ.ಕೋಟೆ ಪಟ್ಟಣದ ಆಡಳಿತ ಸೌಧದ ಎದುರು ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಮತ್ತು ದಲಿತಪರ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ನೀಡಿದರು
ಎಚ್.ಡಿ.ಕೋಟೆ ಪಟ್ಟಣದ ಆಡಳಿತ ಸೌಧದ ಎದುರು ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಮತ್ತು ದಲಿತಪರ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ನೀಡಿದರು   

ಎಚ್.ಡಿ.ಕೋಟೆ: ಪಟ್ಟಣದ ಆಡಳಿತ ಸೌಧದ ಎದುರು ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಮತ್ತು ದಲಿತಪರ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್.ಬಿ.ನೂರಲಕುಪ್ಪೆ ಮಾತಾನಾಡಿ, ಕಳೆದ ಐದು ದಿನಗಳ ಹಿಂದೆ ಭೂ ಮಾಲೀಕ ಈರೇಗೌಡ ಅವರ ತೋಟದಲ್ಲಿ ಒತ್ತೆಯಾಳಾಗಿ ದುಡಿಯುತ್ತಿದ್ದ ನೇಪಾಳಿ ಮೂಲದ ನಿರ್ಮಲಾ ಮತ್ತು ಎರಡು ಮಕ್ಕಳನ್ನು ತಾಲ್ಲೂಕು ಆಡಳಿತ ವತಿಯಿಂದ ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಕೆಗೆ ಮತ್ತು ಕುಟುಂಬಕ್ಕೆ ಇನ್ನೂ ಕೂಡ ಜೀತಮುಕ್ತಿ ಪತ್ರ ನೀಡಲು ಹಿಂದುಮುಂದು ನೋಡುತ್ತಿರುವುದು ಖಂಡನೀಯ ಎಂದರು.

ಜೀವಿಕ ಬಸವರಾಜ್, ಅಕ್ಬರ್ ಪಾಷ, ದಸಂಸ ಮುಖಂಡರಾದ ದೇವರಾಜ್ ಆನಗಟ್ಟಿ, ಸಣ್ಣಕುಮಾರ್, ಆಟೋ ಕುಮಾರ್, ಮಹಿಳಾ ಮುಖಂಡರಾದ ಅನುಷಾ, ಶೈಲಾ ಸುಧಾಮಣಿ, ಶಿವಣ್ಣ, ಜಯಮ್ಮ, ಗಣೇಶ, ಚಂದ್ರಶೇಖರ ಮೂರ್ತಿ, ಶಿವರಾಜ್, ವೆಂಕಟೇಶ, ನಟರಾಜ್, ಶ್ರೀನಿವಾಸ, ಮಲ್ಲಿಗಮ್ಮ, ನಾಗಮ್ಮ, ಚಾ. ನಂಜುಂಡ ಮೂರ್ತಿ, ಮುದ್ದುಮಲ್ಲಯ್ಯ, ಆಕಾಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.