ADVERTISEMENT

ಸಾವಿರ ಮಂದಿಗೆ ಲಸಿಕೆ ಪ್ರಾಯೋಜಕತ್ವ: ‍ಪ್ರಮೋದಾದೇವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 21:05 IST
Last Updated 1 ಮಾರ್ಚ್ 2021, 21:05 IST
ಪ್ರಮೋದಾದೇವಿ ಒಡೆಯರ್‌
ಪ್ರಮೋದಾದೇವಿ ಒಡೆಯರ್‌   

ಮೈಸೂರು: ಕೋವಿಡ್‌–19 ಲಸಿಕೆ ಪಡೆಯಲಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಾವಿರ ಹಿರಿಯ ನಾಗರಿಕರಿಗೆ ನೆರವು ನೀಡಲಿದ್ದು, ಲಸಿಕೆ ಕೊಡಿಸಲಾಗುವುದು ಎಂದು ರಾಜವಂಶಸ್ಥೆ ‍ಪ್ರಮೋದಾದೇವಿ ಒಡೆಯರ್‌ ತಿಳಿಸಿದರು.

‘ಸಾವಿರ ಮಂದಿ ಜೆಎಸ್‌ಎಸ್‌ ಆಸ್ಪತ್ರೆಗೆ ಬಂದು ನೋಂದಣಿ ಮಾಡಿಕೊಂಡು ಲಸಿಕೆ ತೆಗೆದುಕೊಳ್ಳಬಹುದು. ಅದಕ್ಕೆ ತಗಲುವ ಶುಲ್ಕವನ್ನು (₹ 2.5 ಲಕ್ಷ) ಭರಿಸಲಾಗುವುದು ಎಂದು ಹೇಳಿದರು. ಅವರು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಸೋಮವಾರಮೂರನೇಹಂತದ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು.

‘60 ವರ್ಷ ಮೀರಿದ ಹಿರಿಯರು, ಅನಾರೋಗ್ಯವಿರುವ 45 ವರ್ಷ ತುಂಬಿದವರು ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಸರದಿ ಬಂದಾಗ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ’ ಎಂದರು. ದೇಶ ಬೇಗನೇ ಕೋವಿಡ್‌ನಿಂದ ಮುಕ್ತವಾಗಲಿ’ ಎಂದು ‍ಪ್ರಮೋದಾದೇವಿ ಒಡೆಯರ್‌ ಆಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.