ADVERTISEMENT

ಮಧ್ಯಾಹ್ನದ ನಂತರ ವಾಹನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:38 IST
Last Updated 15 ಆಗಸ್ಟ್ 2021, 3:38 IST
ಮೈಸೂರಿನ ಸಂತೆಪೇಟೆ ರಸ್ತೆಯಲ್ಲಿ ಶನಿವಾರ ಲಾಕ್‌ಡೌನ್‌ನಿಂದ ಬಿಕೋ ಎನ್ನುವ ವಾತಾವರಣ ಇತ್ತು
ಮೈಸೂರಿನ ಸಂತೆಪೇಟೆ ರಸ್ತೆಯಲ್ಲಿ ಶನಿವಾರ ಲಾಕ್‌ಡೌನ್‌ನಿಂದ ಬಿಕೋ ಎನ್ನುವ ವಾತಾವರಣ ಇತ್ತು   

ಮೈಸೂರು: ವಾರಾಂತ್ಯ ಲಾಕ್‌ಡೌನ್‌ ಪ್ರಯುಕ್ತ ಶನಿವಾರ ಮಧ್ಯಾಹ್ನದವರೆಗೂ ವಾಹನ ಸಂಚಾರ ಇತ್ತು. ಮಧ್ಯಾಹ್ನ ಬಳಿಕ ರಸ್ತೆಗಳು ಭಣಗುಡಲಾರಂಭಿಸಿದವು. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 39 ದ್ವಿಚಕ್ರ ವಾಹನಗಳು ಹಾಗೂ 11 ಸೇರಿದಂತೆ 50 ವಾಹನಗಳನ್ನು ಪೊಲೀಸರುವಶಪಡಿಸಿಕೊಂಡಿದ್ದಾರೆ.

ದಿನಸಿ ಅಂಗಡಿಗಳು ಮಧ್ಯಾಹ್ನದವರೆಗೆ ತೆರೆದಿದ್ದವು. ಮಧ್ಯಾಹ್ನದ ಬಳಿಕ ಅವೂ ಬಾಗಿಲು ಮುಚ್ಚಿದವು. ಇದರಿಂದ ಎಲ್ಲ ರಸ್ತೆಗಳ ಅಂಗಡಿಗಳು ಸ್ತಬ್ದಗೊಂಡವು.

ನಗರ, ಗ್ರಾಮಾಂತರ ಸಾರಿಗೆ ಬಸ್‌ಗಳ ಸಂಚಾರವೂ ಕಡಿಮೆ ಇತ್ತು. ಆಟೊಗಳಿಗೂ ಸಾರ್ವಜನಿಕರಿಂದ ಬೇಡಿಕೆ ಇರಲಿಲ್ಲ.

ADVERTISEMENT

ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಯಷ್ಟೇ ಇತ್ತು. ಶ್ರಾವಣ ಶನಿವಾರವಾಗಿರುವುದರಿಂದ ಪ್ರಮುಖ ದೇವಾಲಯಗಳನ್ನು ಮುಚ್ಚಲಾಗಿತ್ತು. ಇದರಿಂದ ಜನಸಂಚಾರವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.