ADVERTISEMENT

ವಾಹನ ಡಿಕ್ಕಿ: ಹುಲಿ ಸಾವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:45 IST
Last Updated 27 ಜುಲೈ 2019, 19:45 IST
ಅಪಘಾತಕ್ಕೀಡಾದ ಹುಲಿ
ಅಪಘಾತಕ್ಕೀಡಾದ ಹುಲಿ   

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೇಲುಕಾಮನಹಳ್ಳಿ ಬಳಿಯ ಜಂಗಲ್ ಲಾಡ್ಜ್ ಬಳಿ, ಶನಿವಾರ ಹುಲಿಯೊಂದರ ಕಳೇಬರ ಪತ್ತೆಯಾಗಿದೆ.

4ರಿಂದ 5 ವರ್ಷದ ಹೆಣ್ಣು ಹುಲಿ ಇದಾಗಿದ್ದು, ವಾಹನ ಡಿಕ್ಕಿಯಾಗಿ ಅಥವಾ ಮುಳ್ಳುಹಂದಿ ದಾಳಿಯಿಂದ ಮೃತಪಟ್ಟಿರಬಹುದು ಎಂದು
ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ವಿಶ್ವ ಹುಲಿದಿನ (ಜುಲೈ 29) ಮುನ್ನವೇ ಈ ಘಟನೆ ನಡೆದಿರುವುದು ವನ್ಯಜೀವಿ ಪ್ರೇಮಿಗಳಿಗೆ ನೋವುಂಟು ಮಾಡಿದೆ.

ADVERTISEMENT

‘ರಸ್ತೆಯ ಬಳಿ, ಹುಲಿಯ ಉಗುರಿ ನಿಂದ ಪರಚಿರುವ ಗುರುತು ಇದೆ. ತರಚಿಹೋಗಿರುವುದರಿಂದ ಅದರ ಕೂದಲು ರಸ್ತೆಗೆ ಅಂಟಿಕೊಂಡಿದೆ. ಅದರ ಕತ್ತು ಮತ್ತು ಭುಜದ ಮೂಳೆ ಮುರಿದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ವಾಹನ ಡಿಕ್ಕಿಯಿಂದ ಮೃತಪಟ್ಟಿದೆ’ ಎಂದು ಪಶುವೈದ್ಯ ಡಾ.ನಾಗರಾಜು ತಿಳಿಸಿದರು.

‘ಮೃತಪಟ್ಟ ಸ್ಥಳವನ್ನು ಗಮನಿಸಿದರೆ, ಹುಲಿಯು ಮುಳ್ಳುಹಂದಿ ಜೊತೆಗೆ ಕಾದಾ ಡಿರಬಹುದು. ಜೊತೆಗೆ, ವಾಹ ನಕ್ಕೂ ಸಿಲುಕಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಹೇಳಿದರು. ಮರಣೋತ್ತರ ಪರೀಕ್ಷೆ ಬಳಿಕ, ಕಳೇಬರವನ್ನು ಸುಟ್ಟು
ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.