ADVERTISEMENT

ಮೈಸೂರು: ವಿದ್ಯಾಧೀಶ ತೀರ್ಥರಿಂದ ‘ತಪ್ತ ಮುದ್ರಾಧಾರಣೆ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:56 IST
Last Updated 7 ಜುಲೈ 2025, 2:56 IST
ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಭಾನುವಾರ ಪ್ರಥಮ ಏಕಾದಶಿ ಅಂಗವಾಗಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು
ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಭಾನುವಾರ ಪ್ರಥಮ ಏಕಾದಶಿ ಅಂಗವಾಗಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು   

ಮೈಸೂರು: ಇಲ್ಲಿನ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಮತ್ತು ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಭಾನುವಾರ ಪ್ರಥಮ ಏಕಾದಶಿ ಅಂಗವಾಗಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲಾಯಿತು.

ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ 2ಸಾವಿರಕ್ಕೂ ಹೆಚ್ಚು ಭಕ್ತರಿಗೆ ತಪ್ತ‌ ಮುದ್ರಾಧಾರಣೆ ಮಾಡಿದರು.

‘ಆಶಾಡ ಶುದ್ಧ ಏಕಾದಶಿಯಂದು ಸುದರ್ಶನ ಹೋಮ ಮಾಡಿ ಅದರಲ್ಲಿ ಶಂಕ, ಚಕ್ರವನ್ನು ಬಿಸಿ ಮಾಡಿ ನಮ್ಮ ಮೈಮೇಲೆ ಹಾಕಿಕೊಂಡರೆ ದೇವರ ಕೃಪೆ ಸಿಗುತ್ತದೆ ಎಂಬ ನಂಬಿಕೆ ಇದೆ. ಶ್ರೀನಿವಾಸನ ಕೈನಲ್ಲಿರುವ ಶಂಕ, ಚಕ್ರಗಳನ್ನು ನಾವು ಮುದ್ರೆ ರೂಪದಲ್ಲಿ ಧಾರಣೆ ಮಾಡಿದರೆ ನಮ್ಮ ಮೈಮೇಲೆ ಶ್ರೀನಿವಾಸ ನೆಲಸಿರುತ್ತಾನೆ’ ಎಂದು ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ADVERTISEMENT

ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಎನ್. ಗೋಪಾಲಕೃಷ್ಣನ್, ಗೌರವ ಕಾರ್ಯದರ್ಶಿ ಗುರುಪ್ರಸಾದ್, ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಕೆ.ವಿ. ಶ್ರೀಧರ್, ಖಜಾಂಚಿ ಎಂ.ರಾಘವೇಂದ್ರ ರಾವ್, ಶ್ರೀವತ್ಸ, ಮಂಗಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.