ADVERTISEMENT

ಮೈಸೂರು: ಜಂಬೂಸವಾರಿ ಮೆರವಣಿಗೆ ಮಧ್ಯಾಹ್ನ 3ರ ನಂತರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 4:08 IST
Last Updated 26 ಅಕ್ಟೋಬರ್ 2020, 4:08 IST
ಜಂಬೂಸವಾರಿ (ಸಾಂದರ್ಭಿಕ ಚಿತ್ರ)
ಜಂಬೂಸವಾರಿ (ಸಾಂದರ್ಭಿಕ ಚಿತ್ರ)   
""

ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ವಿಜಯದಶಮಿಯಂದು (ಸೋಮವಾರ) ನಡೆಯಲಿದೆ.

ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಅರಮನೆ ಆವರಣದೊಳಗೆ ಕೇವಲ 300 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಸೋಮವಾರ ನಡೆಯಲಿರುವ ಜಂಬೂ ಸವಾರಿ ವೀಕ್ಷಣೆಗೆ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ ಮಾಡಲಾಗಿದೆ.

ADVERTISEMENT

ಮೆರವಣಿಗೆ ವೀಕ್ಷಣೆಗೆ ಕುರ್ಚಿ, ಶಾಮಿಯಾನದ ವ್ಯವಸ್ಥೆ. ಜಂಬುಸವಾರಿ ತೆರಳುವ ಎಡ ಮತ್ತು ಬಲ ಭಾಗಗಳಲ್ಲಿ ಆಸನಗಳ ವ್ಯವಸ್ಥೆ. ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು. ಅಭಿಮನ್ಯು ನೇತೃತ್ವದ ಗಜಪಡೆ ಚಿನ್ನದ ಅಂಬಾರಿ ಹೊರಲಿದೆ.

ಅರಮನೆ ಆವರಣಕ್ಕಷ್ಟೇ ಸೀಮಿತ: ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಅರಮನೆ ಆವರಣಕ್ಕೆ ಸೀಮಿತವಾಗಲಿರುವ ಜಂಬೂಸವಾರಿ. ಪ್ರತಿ ವರ್ಷ 5.5 ಕಿ. ಮೀ ಸಾಗುತ್ತಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಕೇವಲ 300 ಮೀಟರ್ ಅಂತರದಲ್ಲೇ ಅಂತ್ಯ. ಈ ಬಾರಿ 30 ರಿಂದ 40 ನಿಮಿಷಗಳಲ್ಲೇ ಪೂರ್ಣಗೊಳ್ಳಲಿರುವ ಜಂಬೂಸವಾರಿ ಮೆರವಣಿಗೆ.

ಸೋಮವಾರ ಮಧ್ಯಾಹ್ನ 2:59 ರಿಂದ 3:20 ರೊಳಗಿನ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಸಂಪ್ರದಾಯಬದ್ದವಾಗಿ ಪೂಜೆ ಸಲ್ಲಿಸಲಿದ್ದಾರೆ.

ಬಳಿಕ‌ 3:40 ರಿಂದ 4:15 ರೊಳಗಿನ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಿರುವ ‌ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಪುಷ್ಪಾರ್ಚನೆ ನಡೆಸಲಾಗುತ್ತದೆ.

ಜಂಬೂಸವಾರಿಯಲ್ಲಿ 4 ಕಲಾತಂಡ, ಅಶ್ವಾರೋಹಿ ದಳದ 2 ತುಕಡಿ, 1 ಸ್ತಬ್ದ ಚಿತ್ರ, ಕರ್ನಾಟಕ ಪೊಲೀಸ್ ವಾದನದ ಆನೆಗಾಡಿ ಸಾಗಲಿವೆ. ಇದಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ.

ಗಜಪಡೆ ತಾಲೀಮು ಇಲ್ಲ; ವಿಶೇಷ ಪೂಜೆ
ಆಯುಧಪೂಜೆ ಅಂಗವಾಗಿ ಭಾನುವಾರ ಗಜಪಡೆಗೆ ವಿಶೇಷ ಪೂಜೆ ಸಲ್ಲಿಕೆಯಾಯ್ತು. ಜಂಬೂ ಸವಾರಿಯ ತಾಲೀಮು ನಡೆಯಲಿಲ್ಲ.

ಮೈಸೂರಿನ ಅರಮನೆ ಅಂಗಳದಲ್ಲಿ ಭಾನುವಾರ ಆಯುಧ ಪೂಜೆ ಸಂಭ್ರಮದಿಂದ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.