
ಮೈಸೂರು: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಬಡ ವಿದ್ಯಾರ್ಥಿಗಳಿಗೆಂದು ‘ವಿದ್ಯಾನಿಧಿ’ ಯೋಜನೆ ಆರಂಭಿಸಲಾಗಿದ್ದು, ಈವರೆಗೆ ₹ 60 ಲಕ್ಷ ಸಂಗ್ರಹವಾಗಿದೆ’ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ತಿಳಿಸಿದರು.
‘ವಾರ್ಷಿಕ ₹ 35ಸಾವಿರ ಪಾವತಿಸಲು ಸಾಧ್ಯವಾಗದ ಬಹಳಷ್ಟು ವಿದ್ಯಾರ್ಥಿಗಳು ಸಹಾಯ ಕೋರಿ ನನ್ನ ಬಳಿಗೆ ಬರುತ್ತಾರೆ. ಅಂಥವರ ನೆರವಿಗಾಗಿ ವಿದ್ಯಾನಿಧಿ ಆರಂಭಿಸಿದ್ದೇನೆ. ವಂತಿಗೆ ಸಂಗ್ರಹದ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಅದರಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಭರಿಸಲಾಗುವುದು’ ಎಂದು ಹೇಳಿದರು.
‘2030ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಎಐ (ಕೃತಕ ಬುದ್ಧಿಮತ್ತೆ) ದಾಂಗುಡಿ ಇಟ್ಟಿರುವ ಪರಿಣಾಮ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಕಲಿಯಬೇಕು. ಎಐ ಮಾನವನ ಬುದ್ಧಿಮತ್ತೆ ಮೀರಿ ಮುಂದೆ ಸಾಗುತ್ತಿದೆ. ಎಐ ನಿಯಂತ್ರಿಸಲು ಎಎಸ್‌ಐ( ಆರ್ಟಿಫಿಶಿಯಲ್ ಸೂಪರ್ ಇಂಟಲಿಜೆನ್ಸ್) ಬರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.