ADVERTISEMENT

ಮೈಸೂರು | ಹಿಜಾಬ್, ಕೇಸರಿ ಶಾಲು ವಿವಾದ; ಗೋಡೆ ಚಿತ್ರ ಬರೆದ ಕಲಾವಿದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 8:57 IST
Last Updated 11 ಫೆಬ್ರುವರಿ 2022, 8:57 IST
   

ಮೈಸೂರು: ಇಲ್ಲಿನ ರವಿವರ್ಮ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ರಾಹುಲ್ ಮನೋಹರ ಅವರು ಇಲ್ಲಿನ ದಿವಾನ್ಸ್ ರಸ್ತೆಯ ಗೋಡೆಯೊಂದರಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರವೊಂದನ್ನು ಶುಕ್ರವಾರ ಬರೆದರು.

ಧರ್ಮಗಳಿಗಿಂತ ಶಿಕ್ಷಣವೇ ಮುಖ್ಯ ಎಂಬ ಪರಿಕಲ್ಪನೆಯಡಿ ಅವರು ಚಿತ್ರ ಬರೆದಿದ್ದಾರೆ. ಜತೆಗೆ, ಎಪಿಜೆ ಅಬ್ದುಲ್ ಕಲಾಂ ಅವರು ಮೋಂಬತ್ತಿ ಹಿಡಿದು ಜ್ಯೋತಿ ಬೆಳಗುತ್ತಿರುವ ಚಿತ್ರವೂ ಗಮನ ಸೆಳೆಯುವಂತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಸ್ಲಿಮ್ ಧರ್ಮದವನಾಗಿ ಕ್ರೈಸ್ತ ಧರ್ಮದ ಮೋಂಬತ್ತಿಯಿಂದ ಹಿಂದೂ ಧರ್ಮದ ಜ್ಯೋತಿ ಬೆಳಗುತ್ತಿದ್ದೇನೆ ಎಂದು ಎಪಿಜೆ ಅಬ್ದುಲ್ ಕಲಾಂ ಅವರು ಒಮ್ಮೆ ತಮ್ಮ ಭಾಷಣದಲ್ಲಿ ಹೇಳಿದ್ದರು. ಅದರಂತೆ ಮೂರು ಧರ್ಮಗಳೂ ಸೌಹಾರ್ದತೆಯಿಂದ ಇರಬೇಕು, ಶಿಕ್ಷಣಕ್ಕೆ ಮಹತ್ವ ಕೊಡಬೇಕು ಎಂಬ ಉದ್ದೇಶದಿಂದ ಈ ಚಿತ್ರ ರಚಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.