ADVERTISEMENT

ನೀರು ಸರಬರಾಜಿನಲ್ಲಿ ವ್ಯತ್ಯಯ ನಾಳೆ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:21 IST
Last Updated 22 ಮೇ 2020, 15:21 IST

ಮೈಸೂರು: ಈಚೆಗೆ ಸುರಿದ ಬಿರುಸಿನ ಮಳೆಯಿಂದ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಯಂತ್ರಾಗಾರದಲ್ಲಿ ನೀರನ್ನು ಪಂಪ್ ಮಾಡುವ ಯಂತ್ರಾಗಾರಗಳ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದರಿಂದ, ವಿದ್ಯುತ್ ಸರಬರಾಜಿನಲ್ಲಿ ತೀವ್ರವಾದ ವ್ಯತ್ಯಯವಾಗಿದೆ. ಆದ್ದರಿಂದ ಮೇ 24ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮಂಡಿಮೊಹೊಲ್ಲಾ, ಲಷ್ಕರ್‌ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ, ಎ.ಬಿ.ಸಿ.ಲೇಔಟ್, ಈರನಗರೆ, ಸಿದ್ದಖಿ ನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ ಭಾಗಶ:, ನಜರಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ಲೂರ್ದ್‍ನಗರ, ಮೀನಾಬಜಾರ್, ವಾರ್ಡ್ ಸಂಖ್ಯೆ 8, 17, 18, 19, 23ರಿಂದ 27ರವರಗೆ, 40, 41, 55, 60, 61, 62 ಹಾಗೂ ಮೇಟಗಳ್ಳಿ ಮತ್ತು ಹೆಬ್ಬಾಳ ಕೈಗಾರಿಕಾ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಪತ್ರಿಕಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT