ADVERTISEMENT

ಮೈಸೂರು: ಐಬಿಸಿ ಸ್ಟೈಲ್ಸ್‌ನಲ್ಲಿ ‘ವಾರಾಂತ್ಯದ ಬ್ರಂಚ್‌’ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:23 IST
Last Updated 18 ಜುಲೈ 2025, 4:23 IST
ಮೈಸೂರಿನ ಐಬಿಸಿ ಸ್ಟೈಲ್ಸ್‌ನಲ್ಲಿ ಆರಂಭಿಸಿರುವ ವಾರಾಂತ್ಯದ ಬ್ರಂಚ್‌ನಲ್ಲಿ ಆಹಾರ ಖಾದ್ಯಗಳನ್ನು ಜೋಡಿಸಿರುವುದು
ಮೈಸೂರಿನ ಐಬಿಸಿ ಸ್ಟೈಲ್ಸ್‌ನಲ್ಲಿ ಆರಂಭಿಸಿರುವ ವಾರಾಂತ್ಯದ ಬ್ರಂಚ್‌ನಲ್ಲಿ ಆಹಾರ ಖಾದ್ಯಗಳನ್ನು ಜೋಡಿಸಿರುವುದು   

ಮೈಸೂರು: ಇಲ್ಲಿನ ಐಬಿಸಿ ಸ್ಟೈಲ್ಸ್‌ನ ಫ್ಲೆಮಿಂಗೋ ಮತ್ತು ಲಾಬಿ ಲೌಂಜ್, ಹೊರಾಂಗಣ ವಿಭಾಗವಾದ ಅಲ್ಫ್ರೆಸ್ಕೊದಲ್ಲಿ ವಾರಾಂತ್ಯದ ಬ್ರಂಚ್‌ ವ್ಯವಸ್ಥೆ ಆರಂಭಿಸಿದೆ.

ಅತಿಥಿಗಳು ವೈವಿಧ್ಯಮಯ ಅಡುಗೆ ಪರಿಚಯಿಸಲು ಜುಲೈ 12ರಿಂದ ಈ ವ್ಯವಸ್ಥೆ ಆರಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ಲಭ್ಯವಿರಲಿದೆ. ಬ್ರಂಚ್‌ನಲ್ಲಿ ಚಾರ್ಕ್ಯೂಟರಿ ಮತ್ತು ಚೀಸ್ ಸ್ಟೇಷನ್, ಸ್ಮೋಕ್ಡ್ ಸಾಲ್ಮನ್ ವ್ರ್ಯಾಪ್ ಸ್ಟೇಷನ್, ಪಾಸ್ತಾ ಬೌಲ್ ಸ್ಟೇಷನ್, ಆಮ್ಚಿ ಮುಂಬೈ ಸ್ಟ್ರೀಟ್ ಫುಡ್ ಸ್ಟೇಷನ್, ಮಾಕ್‌ಟೇಲ್ ಸ್ಟೇಷನ್, ಪಾಪ್‌ಕಾರ್ನ್ ಸ್ಟೇಷನ್ ಮತ್ತು ಕ್ರಾಫ್ಟೆಡ್ ಕಾಕ್‌ಟೇಲ್ ಕೌಂಟರ್ ಇವೆ.

‘ಟ್ಯಾಟೂ ಆರ್ಟ್, ಬಲೂನ್ ಮಾಡೆಲಿಂಗ್, ಲೈವ್ ಮ್ಯೂಸಿಕ್ ಮತ್ತು ಮಕ್ಕಳಿಗಾಗಿ ಪ್ಲೇ ಏರಿಯಾವಿದೆ. ಆಲ್ಕೋಹಾಲ್ ರಹಿತ ಬ್ರಂಚ್‌ಗೆ ₹1,099 ಹಾಗೂ ಆಲ್ಕೋಹಾಲ್ ಪ್ಯಾಕೇಜ್‌ಗೆ ₹999 ಹೆಚ್ಚುವರಿ ಶುಲ್ಕ ಮತ್ತು ತೆರಿಗೆ ನಿಗದಿಗೊಳಿಸಲಾಗಿದೆ. ಮಾಹಿತಿಗೆ ಮೊ.ಸಂ 9606959149 ಸಂಪರ್ಕಿಸಬಹುದು’ ಎಂದು ಹೋಟೆಲ್‌ ವ್ಯವಸ್ಥಾಪಕ ಗಣೇಶರಾಮ್ ಅಯ್ಯರ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.