
ಪ್ರಜಾವಾಣಿ ವಾರ್ತೆಮೈಸೂರು: ಕೌಟುಂಬಿಕ ಕಲಹದಲ್ಲಿ ಇದ್ದವರನ್ನು ಬಿಡಿಸಲು ಹೋದ ಗಾಯತ್ರಿಪುರಂ ನಿವಾಸಿ ಝರೀನ್ ತಾಜ್ (55) ಮೃತಪಟ್ಟಿದ್ದಾರೆ.
ಗಾಯತ್ರಿಪುರಂ ನಿವಾಸಿಗಳಾದ ಸೈಯದ್ ಸಲ್ಮಾನ್, ಆಸಿಯಾ, ಶಹಿದಾ ಬಾನು, ಸುಲ್ತಾನಾ ಶುಕ್ರವಾರ ಸಂಜೆ ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ನಾಲ್ವರು ಝರೀನ್ ತಾಜ್ ಅವರನ್ನು ತಳ್ಳಿದ್ದು ನೆಲಕ್ಕೆ ಬಿದ್ದು ತಲೆಗೆ ಏಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿತಾಯಿದಾರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.