ADVERTISEMENT

ನಂಜನಗೂಡು: ಪೊಲೀಸರ ಎದುರು ಮಹಿಳೆ ರಂಪಾಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:41 IST
Last Updated 3 ಆಗಸ್ಟ್ 2025, 2:41 IST
   

ನಂಜನಗೂಡು: ತಾಲ್ಲೂಕಿನ ಶಿರಮಳ್ಳಿಯಲ್ಲಿ ದೂರಿನ ಕುರಿತು ಮಾಹಿತಿ ಸಂಗ್ರಹಕ್ಕಾಗಿ ತೆರಳಿದ್ದ ಪೊಲೀಸರ ಎದುರು ದೂರುದಾರ ಮಹಿಳೆಯು ತಮ್ಮ ಸೀರೆ ಬಿಚ್ಚಿ, ಧಮ್ಕಿ ಹಾಕಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

‘ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ ಎಂದು ಮೂರು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಮಹಿಳೆಯು, ಎಸ್.ಪಿ. ಕಚೇರಿಗೂ ದೂರು ನೀಡಿದ್ದರು. ಘಟನೆ ಪರಿಶೀಲನೆಗಾಗಿ ಹುಲ್ಲಹಳ್ಳಿ ಠಾಣೆ ಸಿಬ್ಬಂದಿ ಮಾಹಿತಿ ಪಡೆಯಲು ಮುಂದಾದಾಗ, ಮಹಿಳೆ  ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾ, ಸೀರೆ ಬಿಚ್ಚಿ ರಂಪಾಟ ಮಾಡಿದ್ದಾರೆ. ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆ. ಈ ಸಂಬಂಧ ದೂರು ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT