ಮೈಸೂರು: ‘ಹನಿಟ್ರ್ಯಾಪ್ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿಲ್ಲ. ಬಿಜೆಪಿಯವರ ಆರೋಪ ಸುಳ್ಳು’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ ಈ ಹಿಂದೆ ಬಿಜೆಪಿಯ 17 ಮಂದಿ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹಾಗಾದರೆ ಅವರ ವಿಡಿಯೊ ಬಿಜೆಪಿಯವರೇ ಮಾಡಿಸಿದ್ದಾ?’ ಆ ಪಕ್ಷದವರಿಗೆ ಕಾಂಗ್ರೆಸ್‌ನ ಯಾವುದೇ ನಾಯಕರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಕೆ.ಎನ್. ರಾಜಣ್ಣ ದೂರು ನೀಡಲು ವಿಳಂಬ ಮಾಡಿದ ಕುರಿತು ಪ್ರತಿಕ್ರಿಯಿಸಿ, ‘ಆ ಬಗ್ಗೆ ರಾಜಣ್ಣ ಅವರನ್ನೇ ಕೇಳಬೇಕು. ಈಗಾಗಲೇ ಗೃಹ ಸಚಿವರ ಜೊತೆ ಮಾತನಾಡಿದ್ದಾರೆ’ ಎಂದರು.
‘ರಾಜಣ್ಣ ಮನೆಯಲ್ಲಿ ಸಿಸಿಟಿವಿ ಇಲ್ಲವೆಂಬ ವಿಷಯ ಗೊತ್ತಿಲ್ಲ. ಮುಖ್ಯಮಂತ್ರಿ ನಿವಾಸದಲ್ಲಿ ಸಿಸಿಟಿವಿ ಇದೆ. ಸಿಸಿಟಿವಿ ಇದ್ದರೆ ಒಳ್ಳೆಯದು. ಪ್ರಕರಣದಲ್ಲಿ ರಾಜಣ್ಣ ಟಾರ್ಗೆಟ್ ಆಗಿಲ್ಲ. ಯಾರೂ ಯಾರನ್ನೂ ಟಾರ್ಗೆಟ್ ಮಾಡುವುದಕ್ಕೆ ಆಗಲ್ಲ. ಅವರು ತಮ್ಮ ಅನುಭವವನ್ನು ಸದನದಲ್ಲಿ ಹೇಳಿದ್ದಾರಷ್ಟೇ. ತನಿಖೆ ನಡೆಯಲಿದ್ದು, ಮುಂದೆ ಸತ್ಯ ಹೊರಬರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.