ADVERTISEMENT

ಕೊಪ್ಪಳ: 98 ಜನರಿಗೆ ಕೋವಿಡ್, ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:39 IST
Last Updated 31 ಜುಲೈ 2020, 15:39 IST

ಕೊಪ್ಪಳ: ಕೋವಿಡ್ ದೃಢಪಟ್ಟಿದ್ದ ಯಲಬುರ್ಗಾ ತಾಲ್ಲೂಕಿನ ಆಡೂರು ಗ್ರಾಮದ 62 ವರ್ಷದ ಮಹಿಳೆ ಹಾಗೂ ಹೊಸಪೇಟೆ ತಾಲ್ಲೂಕಿನ 62 ವರ್ಷದ ಪುರುಷರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃಪಟ್ಟಿದ್ದಾರೆ.

ಕೊಪ್ಪಳ ತಾಲ್ಲೂಕಿನಲ್ಲಿ 27, ಗಂಗಾವತಿ 53, ಕುಷ್ಟಗಿ 17, ಯಲಬುರ್ಗಾ 1 ಸೇರಿದಂತೆ ಶುಕ್ರವಾರ ಒಟ್ಟು 98 ಪ್ರಕರಣಗಳು ದಾಖಲಾಗಿವೆ.

68 ಜನರು ಗುಣಮುಖರಾಗಿದ್ದು, ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 757 ಜನ ಗುಣಮುಖರಾಗಿದ್ದಾರೆ. 175 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ADVERTISEMENT

ಈವರೆಗೆ 24,960 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಇದರಲ್ಲಿ 24,002 ಜನರ ವರದಿ ಬಂದಿದೆ. ಇನ್ನುಳಿದ 958 ಜನರ ವರದಿ ಬರಬೇಕಾಗಿದೆ.

ಕೋವಿಡ್ ಪರೀಕ್ಷೆಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ವಿಕಾಸ್‌ ಕಿಶೋರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.