ADVERTISEMENT

ಪುತ್ತೂರರಿಗೆ ನಿರ್ಮಾಣ್‌–ಪುರಂದರ ಸಂಗೀತ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 10:46 IST
Last Updated 1 ಫೆಬ್ರುವರಿ 2019, 10:46 IST
ಪುತ್ತೂರು ನರಸಿಂಹ ನಾಯಕ್
ಪುತ್ತೂರು ನರಸಿಂಹ ನಾಯಕ್   

ಬೆಂಗಳೂರು: ವೀಯೆಲ್ಲೆನ್‌– ನಿರ್ಮಾಣ್ ಪುರಂದರ ಪ್ರತಿಷ್ಠಾನ ಕೊಡಮಾಡುವ ನಿರ್ಮಾಣ್‌–ಪುರಂದರ ಸಂಗೀತ ರತ್ನ ಪ್ರಶಸ್ತಿ–2019 ಗೆ ವಿದ್ವಾನ್‌ಪುತ್ತೂರು ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದಿಂದ ಕೊಡಮಾಡುತ್ತಿರುವ 10ನೇ ವರ್ಷದ ಪ್ರಶಸ್ತಿಇದಾಗಿದ್ದು, ₹1 ಲಕ್ಷದ ಒಂದು ನಗದು, ಪ್ರಶಸ್ತಿ ಫಲಕ, ಸ್ವರ್ಣಹಾರ ಹಾಗೂ ‍ಪದಕವನ್ನು ಒಳಗೊಂಡಿದೆ.

ಮಾರ್ಚ್‌ 3ರಂದು ಬನ್ನೇರುಘಟ್ಟದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಸಂಜೆ 6ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.