ADVERTISEMENT

ಉತ್ತಮ ಫಲಿತಾಂಶದಿಂದ ಸಂಸ್ಥೆ ಕೀರ್ತಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:30 IST
Last Updated 14 ಫೆಬ್ರುವರಿ 2011, 8:30 IST

ಸಿಂಧನೂರು:  ವಿದ್ಯಾ ಸಂಸ್ಥೆಗಳು ಉತ್ತಮ ಫಲಿತಾಂಶ ಪಡೆದರೆ ಆ ಸಂಸ್ಥೆಯ ಕೀರ್ತಿ ಎಲ್ಲೆಡೆ ಪಸರಿಸುತ್ತದೆ ಎಂದು ರಾಜಾ ಶ್ರೀಕೃಷ್ಣದೇವರಾಯ ಅಭಿಪ್ರಾಯಪಟ್ಟರು. ಅವರು ಶನಿವಾರ ತಾಲ್ಲೂಕಿನ ಹೊಸಳ್ಳಿಕ್ಯಾಂಪ್‌ನ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ 28ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೆ.ಪಾಪಾರಾವ್, ಯಾವುದೇ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡುವುದಾಗಬೇಕು. ಕೇವಲ ಹಣ ಗಳಿಕೆಯ ಉದ್ದೇಶ ಹೊಂದಿದರೆ ಸಂಸ್ಥೆಗಳು ಹೆಸರು ಗಳಿಸಿಕೊಳ್ಳಲು ಅಸಾಧ್ಯ ಎಂದರು.

ಎಸ್.ವೆಂಕಟಕೃಷ್ಣ, ಆಡಳಿತ ಮಂಡಳಿ ಉಪಾಧ್ಯಕ್ಷ ಬಲುಸು ಸುಬ್ರಮಣ್ಯ, ಸದಸ್ಯರಾದ ಜಿ.ಸತ್ಯನಾರಾಯಣ, ಮುರುಳಿಕೃಷ್ಣ, ಸಿಂಹಾದ್ರಿ ಸತ್ಯನಾರಾಯಣ, ಶ್ರೀನಿವಾಸ್, ಎನ್.ಸತ್ಯ ನಾರಾಯಣ, ಎನ್.ವಿ.ಸತ್ಯನಾರಾಯಣ, ವೈ. ನರೇಂದ್ರನಾಥ ಮತ್ತಿತರರು ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.