ADVERTISEMENT

ಕಾರಹುಣ್ಣಿಮೆ; ಎತ್ತುಗಳ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 8:30 IST
Last Updated 17 ಜೂನ್ 2011, 8:30 IST

ಮಾನ್ವಿ: ಪಟ್ಟಣದ ಆದಾಪುರಪೇಟೆಯಲ್ಲಿ ಬುಧವಾರ ಸಂಜೆ ಕಾರಹುಣ್ಣಿಮೆ ನಿಮಿತ್ಯ ಎತ್ತುಗಳ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ, ಕಾರಹುಣ್ಣಿಮೆ ನಿಮಿತ್ಯ ಹಮ್ಮಿಕೊಳ್ಳಲಾಗುವ ಎತ್ತುಗಳ ಓಟದ ಸ್ಪರ್ದೆ  ನಮ್ಮ ಜಾನಪದ ಸಂಸ್ಕೃತಿಯ ಭಾಗವಾಗಿದೆ ಎಂದರು.

ನಂತರ ನಡೆದ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಕುರುಬರ ಯಲ್ಲಪ್ಪ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದವು.

ರಾಜಾ ಮಹೇಂದ್ರ ನಾಯಕ ಅವರು ವೈಯಕ್ತಿಕವಾಗಿ ಪ್ರಥಮ ಸ್ಥಾನ ಪಡೆದ ಕುರುಬರ ಯಲ್ಲಪ್ಪ ಅವರಿಗೆ 5ತೊಲೆ ಬೆಳ್ಳಿ ಕಡಗ ಹಾಗೂ ದ್ವಿತೀಯ ಸ್ಥಾನ ಪಡೆದ ಎತ್ತುಗಳಿಗೆ 3ತೊಲೆ ಬೆಳ್ಳಿ ಕಡಗ ವಿತರಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಸವಾಯಿ, ತೇಜೋಮೂರ್ತಿ ಸ್ವಾಮಿ, ಅಬ್ದುಲ್‌ಸಾಬ, ದೊಡ್ಡ ನಾಗೇಂದ್ರ, ಚಿಂಚರಕಿ ಕೃಷ್ಣಪ್ಪ, ಲಚಮಯ್ಯ, ಭೀಮಯ್ಯ ನಾಯಕ, ಮಲ್ಲಪ್ಪ, ವೀರಭದ್ರಯ್ಯಸ್ವಾಮಿ, ಆನಂದಗೌಡ ಕಪಗಲ್, ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.