ADVERTISEMENT

ಜನಮನ ರಂಜಿಸಿದ ನಗೆಹಬ್ಬ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 6:55 IST
Last Updated 28 ಫೆಬ್ರುವರಿ 2011, 6:55 IST

ಮಾನ್ವಿ: ರಾಷ್ಟ್ರಕವಿ ಕುವೆಂಪು ಸಾಮಾ ಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶನಿವಾರ ಸಂಜೆ ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗೆಹಬ್ಬ- 2011 ಕಾರ್ಯಕ್ರಮ ಜನಮನ ರಂಜಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ಖ್ಯಾತ ನಗೆ ಭಾಷಣಕಾರ್ತಿ ಸುಧಾ ಬರಗೂರು ಹಾಗೂ ಇಂದುಮತಿ ಸಾಲಿಮಠ, ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಬದರಿನಾಥ ಹಾಗೂ ಬೆಂಗಳೂರಿನ ಮಿಮಿಕ್ರಿ ಕಲಾ ವಿದ ರಮೇಶಬಾಬು ಅವರು ತಮ್ಮ ವೈವಿಧ್ಯಮಯ ಮಾತಿನ ಶೈಲಿ, ಅಭಿನಯ ಹಾಗೂ ಹಾವಭಾವ ಗಳಿಂದ ನೆರೆದಿದ್ದ ಸಾವಿರಾರರು ಪ್ರೇಕ್ಷ ಕರನ್ನು ಮೂರು ಗಂಟೆಗಳವರೆಗೆ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾ ಬರಗೂರು, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ, ಒಳ್ಳೆಯ  ಸಂಸ್ಕಾರವಂತರನ್ನಾಗಿ ಬೆಳೆಸುವಂತೆ ಮನವಿ ಮಾಡಿದರು. ಇಂದುಮತಿ ಸಾಲಿಮಠ ಅವರು ಚಿತ್ರನಟಿಯರಾದ ಕಲ್ಪನಾ, ಆರತಿ ಹಾಗೂ ಜಯಂತಿ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಾಜಮುಖಿ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕುವೆಂಪು ಪ್ರತಿಷ್ಠಾನ ಪ್ರಕಟಿಸಿದ ಸಾಹಿತಿ ಎಂ.ವೀರೇಶ ಅವರ ಕವನ ಸಂಕಲನ ‘ಬದುಕಿನಾಳ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲನಗೌಡ ನಕ್ಕುಂದಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಿವಲಿಂಗಪ್ಪ ವಟಗಲ್, ಜಿಪಂ ಸದಸ್ಯ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಸಿಪಿಐ ಶರಣಪ್ಪ ಓಲೇಕಾರ, ಸಾಹಿತಿ ಎಂ.ವೀರೇಶ ಮತ್ತಿತರರು ವೇದಿಕೆ ಯಲ್ಲಿದ್ದರು. ಕುವೆಂಪು ಪ್ರತಿಷ್ಠಾನದ ಪದಾಧಿಕಾರಿಗಳಾದ  ವೈ.ಶ್ರೀನಿವಾಸ, ಎಚ್.ಶರ್ಪುದ್ದೀನ್ ಪೋತ್ನಾಳ ಹಾಗೂ ಜಿ.ಎಸ್.ಬಾಲಾಜಿ ಸಿಂಗ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.