ADVERTISEMENT

ದೈಹಿಕ ಶಿಕ್ಷಕರಿಂದ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:20 IST
Last Updated 3 ಅಕ್ಟೋಬರ್ 2011, 8:20 IST

ದೇವದುರ್ಗ: ದೈಹಿಕ ಶಿಕ್ಷಣ ಶಿಕ್ಷಕರು ಶಿಕ್ಷಣ ಇಲಾಖೆಯಲ್ಲಿ ಅತ್ಯಂತ ಶೋಷಣೆಗೆ ಒಳಗಾಗುತ್ತಿದ್ದು, ಕಳೆದ 28 ವರ್ಷಗಳಿಂದ ಸರ್ಕಾರ ಮತ್ತು ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದರೂ ಇಂದಿಗೂ ನ್ಯಾಯ ದೊರಕಿಲ್ಲ.

ಕೂಡಲೇ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿಕೊಂಡರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವರಿಗೆ ಸಂಘದ ಅಧ್ಯಕ್ಷ  ಕೆ. ಮಲ್ಲಯ್ಯ, ಗೌರವ ಅಧ್ಯಕ್ಷ ನಿಂಗಪ್ಪ, ಉಪಾಧ್ಯಕ್ಷ ಸುಚಿತಾನಂದ, ಖಜಾಂಚಿ ಕು. ಮಮತಾ ಆದಿ, ಪ್ರಧಾನ ಕಾರ್ಯದರ್ಶಿ ಬಾಲಪ್ಪ ಭಾವಿಮನಿ ಮತ್ತು ಪದಾಧಿಕಾರಿಗಳಾದ ರಂಗನಾಥ ಹಾಗೂ ಮತ್ತಿತರರು ಮನವಿ ಪತ್ರ ಸಲ್ಲಿಸಿದ್ದರು.

ಪ್ರೋ. ಎಲ್.ಆರ್. ವೈದ್ಯನಾಥನ್ ವರದಿ ಅನುಷ್ಠಾನ, ನೇಮಕಾತಿ ವಿಳಂಬ, ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ದೈಹಿಕ ಶಿಕ್ಷಣ ಸಂಯೋಜಕರನ್ನಾಗಿ ಭರ್ತಿ ಮಾಡುವುದು, ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಿಪಿಇಡಿಗೆ ಮತ್ತು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರನ್ನು ಎಂಇಡಿಗೆ ನಿಯೋಜಿಸಬೇಕು, ಖಾಲಿ ಇರುವ ಪ್ರಾಥಮಿಕ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕು, ದೈಹಿಕ ಶಿಕ್ಷಕರಿಗೆ ವಲಯ ಮಟ್ಟದಲ್ಲಿ ಸಿಆರ್‌ಪಿ ಗಳಾಗಿ ಭರ್ತಿ ಮಾಡಬೇಕು ಮತ್ತು ದೈಹಿಕ ಶಿಕ್ಷಕರನ್ನು ಮುಖ್ಯಗುರುಗಳಾಗಿ ಬಡ್ತಿ ನೀಡಬೇಕೆಂಬ ಪ್ರಮುಖ ಬೇಡಿಕೆಗಳು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.