ADVERTISEMENT

ಮತದಾನ ಜಾಗೃತಿಗಾಗಿ ಕ್ರೀಡಾಕೂಟ

ಯುವಕರಿಗೆ ಕಬಡ್ಡಿ, ವಾಲಿಬಾಲ್‌ ಪಂದ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:49 IST
Last Updated 6 ಮೇ 2018, 12:49 IST
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲಾ ಅವರಣದಲ್ಲಿ ಶನಿವಾರ ಮತದಾನ ಜಾಗೃತಿಗಾಗಿ ಯುವಕರಿಗೆ ವಿವಿಧ ಕ್ರೀಡಾಕೂಟ ನಡೆಸಲಾಯಿತು
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲಾ ಅವರಣದಲ್ಲಿ ಶನಿವಾರ ಮತದಾನ ಜಾಗೃತಿಗಾಗಿ ಯುವಕರಿಗೆ ವಿವಿಧ ಕ್ರೀಡಾಕೂಟ ನಡೆಸಲಾಯಿತು   

ದೇವದುರ್ಗ: ‘ಮತದಾನ ಜಾಗೃತಿಗಾಗಿ ಯುವಕರಿಗೆ ತಾಲ್ಲೂಕು ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ’ ಎಂದು ಸರ್ಕಾರಿ ಬಾಲಕರ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಪ್ಪ ಭಾವಿಮನಿ ತಿಳಿಸಿದ್ದಾರೆ.

ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮತದಾನ ಜಾಗೃತಿ ಪ್ರಯುಕ್ತ ಯುವಕರಿಗಾಗಿ ತಾಲ್ಲೂಕು ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗೆ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯವಸ್ಥಾಪಕ ನಿಂಗಪ್ಪ ಅವರು ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳು ಹೆಚ್ಚಿ ಉತ್ಸಾಹಕತೆಯಿಂದ ಭಾಗವಹಿಸಿದ್ದರು. ಕಬಡ್ಡಿಯಲ್ಲಿ ನಿಂಗಯ್ಯ ಮತ್ತು ಅವರ ತಂಡ ಪ್ರಥಮ ಸ್ಥಾನ, ಹನುಮಂತರಾಯ ಮತ್ತು ಅವರ ತಂಡ ದ್ವಿತೀಯ ಸಥಾನ ಪಡೆದುಕೊಂಡರು.

ADVERTISEMENT

ವಾಲಿಬಾಲ್ ಪಂದ್ಯದಲ್ಲಿ ಪ್ರೇಮ ಮತ್ತು ಅವರ ತಂಡ ಪ್ರಥಮ ಸ್ಥಾನ ಮತ್ತು ಬಸವರಾಜ ಮತ್ತು ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡದವರು ಮೇ 9ರಂದು ರಾಯಚೂರಿನ ಸರ್ಕಾರಿ ಬಾಲಕರ ಪ್ರೌಢ ಶಾಲಾ ಅವರಣದಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಗಳು ನಡೆಯುತ್ತವೆ ಅದರಲ್ಲಿ ಭಾಗವಹಿಸಬಹದು ಎಂದು ದೈಹಿಕ ಶಿಕ್ಷಣ ಶಿಕ್ಷಕ ಬಾಲಪ್ಪ ಭಾವಿಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.