ಮಾನ್ವಿ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವನ್ನು ಸಂಪೂರ್ಣವಾಗಿ ತಡೆಗಟ್ಟದಿ ರುವುದು ವಿಷಾದನೀಯ. ಮಹಿಳಾ ಹಕ್ಕುಗಳ ಕುರಿತು ಸಮರ್ಪಕ ತಿಳಿವಳಿಕೆ ಮೂಡಿಸುವುದ ಅಗತ್ಯ ಎಂದು ಸಿವಿಲ್ ನ್ಯಾಯಾಧೀಶ ಪಿ.ಜೆ.ಪರಮೇಶ್ವರ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಮರೋಪಾದಿ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಹಸೀಲ್ದಾರ ಸೋಮಲಿಂಗ ಜಿ. ಗೆಣ್ಣೂರು ಮಾತನಾಡಿ, ಮಹಿಳೆ ಯರು ಸಾಕ್ಷರರಾಗುವದರಿಂದ ಕುಟುಂಬ ಅಭಿವೃದ್ಧಿ ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಅಂಗನವಾಡಿ ಕೇಂದ್ರಗಳಿಗೆ ಸಮರೋ ಪಾದಿ ಭೇಟಿ’ ಕಾರ್ಯಕ್ರಮದ ಕುರಿತು ಜಿಲ್ಲಾ ನಿರೂಪಣಾಧಿಕಾರಿ ರುದ್ರಪ್ಪ ಮಾತನಾಡಿದರು. ವಕೀಲರಾದ ಗುಮ್ಮಾ ಬಸವರಾಜ, ಜಯಶ್ರೀ ಹಾಗೂ ವೀರನಗೌಡ ಪೋತ್ನಾಳ ಮಾತನಾಡಿದರು. ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶೇಖರಪ್ಪ ಕೊಟ್ನೇಕಲ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವ ರಾಜ, ಚಂದ್ರಕಲಾ ವಕೀಲ ಇದ್ದರು. ಮಲ್ಲಮ್ಮ ಪ್ರಾರ್ಥಿಸಿದರು. ಸಿಡಿಪಿಒ ವೀರನಗೌಡ ಸ್ವಾಗತಿಸಿದರು. ನಾಗಮ್ಮ ನಿರೂಪಿಸಿದರು. ಎಸಿಡಿಪಿಒ ಯೋಗಿತಾ ಬಾಯಿ ವಂದಿಸಿದರು.ಅಂಗನವಾಡಿ ಮೇಲ್ವಿಚಾರಕಿ ಯರು, ಎಸಿಡಿಪಿಒ ಹಾಗೂ ಸ್ಥಳೀಯ ಕಾರ್ಯ ಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.