ADVERTISEMENT

ಯರಗೇರಾ: ಹಜರತ್ ಬಡೇಸಾಬ್ ಉರುಸ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:00 IST
Last Updated 2 ಜನವರಿ 2012, 8:00 IST

ರಾಯಚೂರು:  ಜಿಲ್ಲೆಯ ಪ್ರಸಿದ್ಧ ಉರುಸ್‌ಗಳಲ್ಲೊಂದಾದ ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಹಜರತ್ ಬಡೇಸಾಬ್ ಅವರ 113ನೇ ಉರುಸಿನ ಗಂಧದ ಮೆರವಣಿಗೆ ಶನಿವಾರ ಸಂಜೆ ನಡೆಯಿತು.

ಸಜ್ಜಾದೆ ಸಯ್ಯದ್ ಹಫಿಜುಲ್ಲಾ ಖಾದ್ರಿ ಅವರ ಮನೆಯಿಂದ ಗಂಧದ ಮೆರವಣಿಗೆ ಹೊರಟು ದರ್ಗಾದಲ್ಲಿ ಫಾತೆಹ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಫಾತೆಹ ಕಾರ್ಯಕ್ರಮವನ್ನು ಸಯ್ಯದ್ ಫಜಲುಲ್ಲಾ ಖಾದ್ರಿ ಹಾಗೂ ಸಯ್ಯದ್ ಹಫಿಜುಲ್ಲಾ ಖಾದ್ರಿ ನೆರವೇರಿಸಿದರು.

ಸಯ್ಯದ್  ಫಜಲ್, ದರ್ಗಾ ಸಮಿತಿ ಅಧ್ಯಕ್ಷ ಮೈಮೂದ್ ಪಟೇಲ್, ಉಪಾಧ್ಯಕ್ಷ ಎಂ.ಜೆ ಖಾಜಾ ಹುಸೇನ್, ಕಾರ್ಯದರ್ಶಿ ಮಹಮ್ಮದ್ ನಿಜಾಮುದ್ದೀನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಡಳಿತಾಧಿಕಾರಿ ಶೇಖ ಮಹಮ್ಮದ್ ಇಕ್ಬಾಲ್, ಗ್ರಾಮದ ಗಣ್ಯರಾದ ಪ್ರತಾಪರೆಡ್ಡಿ, ವಿದ್ಯಾನಂದರೆಡ್ಡಿ, ಹರಿಶ್ಚಂದ್ರರೆಡ್ಡಿ, ಜನಾರ್ಧನರೆಡ್ಡಿ, ವೆಂಕಟರಾಮರೆಡ್ಡಿ, ಶ್ರೀನಿವಾಸರೆಡ್ಡಿ, ಕೃಷ್ಣಾಜೀ, ನರಸಿಂಹಜೀ, ನರಸೋಜಿ, ಫಾರೂಕ್, ಫಕ್ರುದ್ಧೀನ್ ಮಲಂಗ್, ಮುಜಾವರ ಪಾಷಾ ಪಾಲ್ಗೊಂಡಿದ್ದರು. ಯರಗೇರಾ ಗ್ರಾಮದ ಸುತ್ತಮುತ್ತಲಿನ ಸುಮಾರು 80 ಹಳ್ಳಿ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.