ADVERTISEMENT

ಹಾಸ್ಟೆಲ್‌ಗಳಿಗೆ ಶಾಸಕ ಭೇಟಿ, ಪರಿಶೀಲನೆ

ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 7:20 IST
Last Updated 2 ಜೂನ್ 2018, 7:20 IST
ಹಾಸ್ಟೆಲ್‌ಗಳಿಗೆ ಶಾಸಕ ಭೇಟಿ, ಪರಿಶೀಲನೆ
ಹಾಸ್ಟೆಲ್‌ಗಳಿಗೆ ಶಾಸಕ ಭೇಟಿ, ಪರಿಶೀಲನೆ   

ಲಿಂಗಸುಗೂರು: ಇಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆಗಳ ಮೆಟ್ರಿಕ್‌ ನಂತರದ ವಸತಿ ನಿಲಯಗಳಿಗೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ನಿಲಯಗಳಲ್ಲಿ ನೀಡುತ್ತಿರುವ ಸೌಲಭ್ಯಗಳು, ಗುಣಮಟ್ಟದ ಊಟ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.

ಗುಣಮಟ್ಟದ ಆಹಾರ, ಶುದ್ಧ ಕುಡಿವ ನೀರು, ಗ್ರಂಥಾಲಯ, ಆರೋಗ್ಯ ತಪಾಸಣೆ, ಕ್ರೀಡಾ ಸಾಮಗ್ರಿ, ಪತ್ರಿಕೆಗಳ ಪೂರೈಕೆ, ಹಾಸಿಗೆ ಸೇರಿದಂತೆ ಅಗತ್ಯ ಸೌಲಭ್ಯ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸದರು. ಪರಿಶಿಷ್ಟ ಪಂಗಡದ ವಸತಿ ನಿಲಯ ಪಟ್ಟಣದಿಂದ 4 ಕಿ.ಮೀ. ಅಂತರದಲ್ಲಿದ್ದು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ವಸತಿ ನಿಲಯಗಳ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ನೀವು ವಸತಿ ನಿಲಯಗಳಿಗೆ ನಿತ್ಯ ಭೇಟಿ ಮಾಡಿ ವಿದ್ಯಾರ್ಥಿ ಸಮೂಹ ಸಮಸ್ಯೆಗಳಲ್ಲಿಗೆ ಸ್ಪಂದಿಸಬೇಕು.  ಹಣಕಾಸಿನ ನೆರವು ಬೇಕಾದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡುವಂತೆ ತಾಕೀತು ಮಾಡಿದರು.

ಪುರಸಭೆ ವ್ಯಾಪ್ತಿಯ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ವರ್ಷದಿಂದ ವರ್ಷಕ್ಕೆ ಪಟ್ಟಣದ ಬಡಾವಣೆಗಳು ವಿಸ್ತರಣೆಗೊಳ್ಳುತ್ತ ಸಾಗಿದ್ದು, ಜನಸಂಖ್ಯೆ ಆಧರಿಸಿ ಎಲ್ಲ ಬಡಾವಣೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್‌ ಹಾಕಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷ ಖಾದರಪಾಷ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲಿಂಗರಾಜ ಹಟ್ಟಿ, ವಾಹಿದ್‌ ಖಾದ್ರಿ, ಮುಖಂಡರಾದ ಭೂಪನಗೌಡ ಕರಡಕಲ್ಲ, ಅಮರಗುಂಡಪ್ಪ ಮೇಟಿ, ಪಾಮಯ್ಯ ಮುರಾರಿ, ಗುಂಡಪ್ಪ ನಾಯಕ, ಶಂಕರಗೌಡ ಬಳಗಾನೂರು, ಪರಶುರಾಮ ನಗನೂರು, ಎಂ.ಡಿ.ರಫಿ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ, ಪುರಸಭೆ ಮುಖ್ಯಾಧಿಕಾರಿ ಗುಂಡಪ್ಪ ಸಾಲಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.