ADVERTISEMENT

‘ಹಿಂಗಾರು ಬೆಳೆ ಗೊಂದಲ ನಿವಾರಿಸಿ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 8:58 IST
Last Updated 25 ಅಕ್ಟೋಬರ್ 2017, 8:58 IST

ಸಿಂಧನೂರು: ‘ತುಂಗಭದ್ರಾ ವ್ಯಾಪ್ತಿಯ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕಿನ ರೈತರ ಪರಿಸ್ಥಿತಿ ಈ ವರ್ಷ ಮೂರಾಬಟ್ಟೆಯಾಗಿದ್ದು, ಯಾವ ಬೆಳೆ ಹಾಕಬೇಕೋ ಎನ್ನುವ ಗೊಂದಲ ಮೂಡಿದೆ. ಇದಕ್ಕೆ ಕೃಷಿ ಇಲಾಖೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದ್ದಾರೆ.

ಮಂಗಳವಾರ ಹೇಳಿಕೆ ನೀಡಿರುವ ಅವರು, ಮುಂಗಾರು ಬೆಳೆಗೆ ತುಂಗಭದ್ರಾ ಜಲಾಶಯದಿಂದ ತಡವಾಗಿ ನೀರು ಬಿಟ್ಟು, ಅಲ್ಪ ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಚಾರ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಸಜ್ಜೆ, ಹತ್ತಿ ಬೆಳೆ ಬಿತ್ತನೆ ಮಾಡಿಕೊಂಡಿದ್ದರು. ಕೆಲ ಮೇಲ್ಭಾಗದ ರೈತರು ಸೆಪ್ಟೆಂಬರ್ ತಿಂಗಳ ಪೂರ್ತಿ ಭತ್ತ ನಾಟಿ ಮಾಡಿದ್ದಾರೆ. ಆದರೆ ಸದ್ಯ ಚಳಿಗಾಲ ಆರಂಭಗೊಂಡಿದ್ದು, ಭತ್ತ ವಡೆ ಬಿಡುವ ಸಮಯದಲ್ಲಿ ಚಳಿ ಉಂಟಾದರೆ ಕಾಳು ಆಗುವುದಿಲ್ಲ ಎಂದು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.