ADVERTISEMENT

ಮತ ಎಣಿಕೆಯಲ್ಲಿ ಭಾಗಿಯಾಗಿದ್ದ 15 ಸಿಬ್ಬಂದಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 5 ಮೇ 2021, 8:37 IST
Last Updated 5 ಮೇ 2021, 8:37 IST
   

ಮಸ್ಕಿ(ರಾಯಚೂರು ಜಿಲ್ಲೆ): ಮೇ 2 ರಂದು ರಾಯಚೂರಿನಲ್ಲಿ ನಡೆದ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಮತಗಳ ಎಣಿಕೆಯಲ್ಲಿ ಪಾಲ್ಗೊಂಡಿದ್ದ ಪಟ್ಟಣದ ಕಂದಾಯ ಇಲಾಖೆ, ಪುರಸಭೆಯ 15 ಅಧಿಕಾರಿಗಳಿಗೆ ಕೋವಿಡ್ ದೃಢವಾಗಿದೆ.

ಮತ ಎಣಿಕೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಚುನಾವಣೆ ಆಯೋಗದ ಸೂಚನೆಯಂತೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮತ ಎಣಿಕೆ ವೇಳೆ ರ್‍ಯಾಪಿಡ್‌ ಟೆಸ್ಸ್ ನಲ್ಲಿ ನೆಗಟಿವ್ ಬಂದಿದ್ದ ವರದಿ ಆರ್ ಟಿಪಿಸಿಆರ್ ಟೆಸ್ಟ್‌ನಲ್ಲಿ ಪಾಸಿಟಿವ್ ವರದಿ ಬಂದಿರುವುದು ತಾಲ್ಲೂಕು ಆಡಳಿತದಲ್ಲಿ ಆತಂಕ ಸೃಷ್ಟಿಸಿದೆ. ಪುರಸಭೆ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ ಸಾನಿಟೈಜರ್ ಸಿಂಪಡಿಸಲಾಗಿದೆ.

ಕೊರೊನಾ ಸೋಂಕಿತರ ಸಂರ್ಪಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆಸಲಾಗುತ್ತಿದೆ. ಸೋಂಕಿತರ ಕಚೇರಿ, ಮನೆಗಳಿಗೆ ಪುರಸಭೆಯಿಂದ ಸಾನಿಟೈಸ್ ಮಾಡಲಾಗಿದೆ. ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ' ಎಂದು ವೈದ್ಯಾಧಿಕಾರಿ ಡಾ. ಮೌನೇಶ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.