ADVERTISEMENT

ಬಲೆಗೆ ಬಿದ್ದ 31 ಕೆ.ಜಿ ತೂಕದ ಮೀನು

​ಪ್ರಜಾವಾಣಿ ವಾರ್ತೆ
Published 22 ಮೇ 2021, 8:23 IST
Last Updated 22 ಮೇ 2021, 8:23 IST
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಲೆಗೆ ನಿದ್ದ ಕಟ್ಲಾ ಜಾತಿ ಮೀನು
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಲೆಗೆ ನಿದ್ದ ಕಟ್ಲಾ ಜಾತಿ ಮೀನು   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಶುಕ್ರವಾರ ಬರೋಬ್ಬರಿ 31 ಕೆ.ಜಿ.ತೂಕದ ಮೀನು ಬಲೆಗೆ ಬಿದ್ದಿದೆ.

ಇಲ್ಲಿಯ ಚಿಮ್ಮಲಗಿ ಭಾಗ-1 ಎ ಗ್ರಾಮದ ಮೀನುಗಾರ ಮುತ್ತಪ್ಪ ಬಾಬು ಕಟ್ಟಿಮನಿ ಅವರು ಹಾಕಿದ ಬಲೆಗೆ ಕಟ್ಲಾ ಜಾತಿಯ ಮೀನು ಬಿದ್ದಿದೆ. ಯಮನೂರಿ ಕಟ್ಟಿಮನಿ, ಮುತ್ತಪ್ಪ ಶಿಳ್ಳೆಕ್ಯಾತರ್ ಇದ್ದರು.

‘ನೀರಿಗೆ ಬಲೆ ಬೀಸಿದಾಗ ಎಷ್ಟು ಜಗ್ಗಿದರೂ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಮೂವರೂ ಸೇರಿ ಜೋರಾಗಿ ಬಲೆ ಎಳೆಯುತ್ತಾ ದಂಡೆಗೆ ತಂದಾಗ ದೊಡ್ಡ ಮೀನು ಸಿಕ್ಕಿತ್ತು. ಎಂದು ಮುತ್ತಪ್ಪ ಕಟ್ಟಿಮನಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.