ADVERTISEMENT

ರಾಯಚೂರು ಜಿಲ್ಲೆಯಲ್ಲಿ 47.5 ಮಿಮೀ ಮಳೆ ದಾಖಲು

​ಪ್ರಜಾವಾಣಿ ವಾರ್ತೆ
Published 19 ಮೇ 2022, 14:44 IST
Last Updated 19 ಮೇ 2022, 14:44 IST

ರಾಯಚೂರು: ಜಿಲ್ಲೆಯಾದ್ಯಂತ ಗುರುವಾರ ಸರಾಸರಿ 47.5 ಮಿಲಿ ಮೀಟರ್‌ ಮಳೆ ಬಿದ್ದಿರುವುದು ಮಾಪಕದಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾಡಿಕೆ ಮಳೆ 11.6 ಮಿಮೀ ಗಿಂತಲೂ ಶೇ 44 ರಷ್ಟು ಗರಿಷ್ಠ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಸಿಂಧನೂರು ಮತ್ತು ಮಸ್ಕಿ ತಾಲ್ಲೂಕುಗಳಲ್ಲಿ ಅತಿಹೆಚ್ಚು ಕ್ರಮವಾಗಿ 58.3 ಮಿಮೀ ಮತ್ತು 51 ಮಿಮೀ ಮಳೆಯಾಗಿದೆ. ದೇವದುರ್ಗ ತಾಲ್ಲೂಕಿನಲ್ಲಿ 7.6, ಲಿಂಗಸುಗೂರು ತಾಲ್ಲೂಕಿನಲ್ಲಿ 38.5, ಮಾನ್ವಿ ತಾಲ್ಲೂಕಿನಲ್ಲಿ 45.4, ರಾಯಚೂರು ತಾಲ್ಲೂಕಿನಲ್ಲಿ 18.8 ಹಾಗೂ ಸಿರವಾರ ತಾಲ್ಲೂಕಿನಲ್ಲಿ 17.7 ಮಿಮೀ ಮಳೆ ಸುರಿದಿದೆ.

ಭಾರಿಗಾಳಿಯೊಂದಿಗೆ ಮಳೆ ಬೀಳುತ್ತಿರುವುದರಿಂದ ಕೆಲವು ಕಡೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಹಾನಿ ಪ್ರಮಾಣ ಇನ್ನೂ ಗೊತ್ತಾಗಿಲ್ಲ. ಸದ್ಯಕ್ಕೆ ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಮಾಡಿದ್ದು, ಮಳೆ ಸುರಿಯುತ್ತಿರುವುದು ವರದಾನವಾಗಿದೆ.

ADVERTISEMENT

ಮಾನ್ವಿ ತಾಲ್ಲೂಕಿನಲ್ಲಿ ಮಾನ್ವಿ ಹೋಬಳಿಯಲ್ಲೇ ಅತಿಹೆಚ್ಚು 56.3 ಮಿಮೀ, ದೇವದುರ್ಗ ತಾಲ್ಲೂಕಿನಲ್ಲಿ ಗಲಗ ಹೋಬಳಿಯಲ್ಲಿ ಅತಿಹೆಚ್ಚು 18 ಮಿಮೀ, ಲಿಂಗಸುಗೂರು ತಾಲ್ಲೂಕಿನಲ್ಲಿ ಮುದಗಲ್‌ ಹೋಬಳಿಯಲ್ಲಿ ಅತಿಹೆಚ್ಚು 73 ಮಿಮೀ, ರಾಯಚೂರು ತಾಲ್ಲೂಕಿನಲ್ಲಿ ರಾಯಚೂರು ಹೋಬಳಿಯಲ್ಲೇ ಅತಿಹೆಚ್ಚು 45.4 ಮಿಮೀ, ಮಸ್ಕಿ ತಾಲ್ಲೂಕಿನಲ್ಲಿ ತಲೇಖಾನ್‌ ಹೋಬಳಿಯಲ್ಲಿ ಅತಿಹೆಚ್ಚು 100.2 ಮಿಮೀ, ಸಿಂಧನೂರು ತಾಲ್ಲೂಕಿನಲ್ಲಿ ಗುಂಜಳ್ಳಿ ಹೋಬಳಿಯಲ್ಲಿ ಅತಿಹೆಚ್ಚು 160 ಮಿಮೀ ಹಾಗೂ ಸಿರವಾರ ತಾಲ್ಲೂಕಿನಲ್ಲಿ ಕಲ್ಲೂರು ಹೋಬಳಿಯಲ್ಲಿ ಅತಿಹೆಚ್ಚು 45.8 ಮಿಮೀ ಮಳೆ ಸುರಿದಿದೆ.

ಯಾವುದೇ ಜೀವಹಾನಿಯಾಗಿಲ್ಲ. ಮಳೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಸಂಕಷ್ಟ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.