ADVERTISEMENT

ಸಿಂಧನೂರಿನಲ್ಲಿ ಡೆಂಗಿಗೆ 6 ವರ್ಷದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:00 IST
Last Updated 18 ಸೆಪ್ಟೆಂಬರ್ 2021, 17:00 IST
ಸೋನು
ಸೋನು   

ಸಿಂಧನೂರು (ರಾಯಚೂರು ಜಿಲ್ಲೆ):ನಗರದ ಮಹಿಬೂಬಿಯಾ ಕಾಲೊನಿಯ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6) ಡೆಂಗಿ ಜ್ವರದಿಂದ ಗುಣಮುಖವಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.

ಕಳೆದ ವಾರ ಜ್ವರ ಕಾಣಿಸಿಕೊಂಡಾಗ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಖಾಸಗಿ ಆಸ್ಪತ್ರೆಯಲ್ಲೂ ತಪಾಸಣೆ ಮಾಡಿಸಿದ್ದರು. ಪ್ಲೇಟ್‍ಲೆಟ್ ಗಣನೀಯ ಇಳಿಮುಖವಾಗುವುದು ಕಂಡು ಬಂದಿತ್ತು. ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಗುರುವಾರ ಮಗುವನ್ನು ದಾಖಲಿಸಲಾಗಿತ್ತು.

‘ಇದು ಶಂಕಿತ ಡೆಂಗಿ ಪ್ರಕರಣ ಇರಬಹುದು. ಈ ಬಗ್ಗೆ ವರದಿಗಳನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಬೇಕಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.