ADVERTISEMENT

ಲಿಂಗಸುಗೂರು: ಅಪಘಾತ ಪ್ರಕರಣ, ಬಸ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 3:03 IST
Last Updated 30 ನವೆಂಬರ್ 2021, 3:03 IST
ಲಿಂಗಸುಗೂರಲ್ಲಿ ಬಸ್‌ ಅನ್ನು ಡಿವೈಎಸ್ಪಿ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು
ಲಿಂಗಸುಗೂರಲ್ಲಿ ಬಸ್‌ ಅನ್ನು ಡಿವೈಎಸ್ಪಿ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು   

ಲಿಂಗಸುಗೂರು: ‘ಇಲ್ಲಿನ ಮಾಣಿಕೇಶ್ವರಿ ಆಶ್ರಮದ ಬಳಿ ನವೆಂಬರ್ 10ರಂದು ಸಂಭವಿಸಿದ್ದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಪೊಲೀಸರು ಸಾರಿಗೆ ಸಂಸ್ಥೆ ಬಸ್‍ (ವಾಹನ) ಪತ್ತೆ ಹಚ್ಚುವಲ್ಲಿ ವಹಿಸಿದ ಶ್ರಮ ಶ್ಲಾಘನೀಯ’ ಎಂದು ಡಿವೈಎಸ್ಪಿ ಎಸ್‍.ಎಸ್‍ ಹುಲ್ಲೂರು ಹೇಳಿದರು.

‘ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನ ಯಾವುದು ಎಂದು ಪತ್ತೆ ಹಚ್ಚುವುದೇ ಸವಾಲಾಗಿತ್ತು. ಕೆಲ ಕುರುಹುಗಳ ಆಧಾರದ ಮೇಲೆ ಸಿಪಿಐ ಮಹಾಂತೇಶ ಸಜ್ಜನ ನೇತೃತ್ವದ ತಂಡ ವಿವಿಧ ಸಾರಿಗೆ ಘಟಕ, ಚೆಕ್‌ಪೋಸ್ಟ್‌ಗಳಿಗೆ ತೆರಳಿ ಕೆಲವೇ ದಿನಗಳಲ್ಲಿ ಸಾಕ್ಷ್ಯಿ ಸಮೇತ ವಾಹನ ಪತ್ತೆ ಮಾಡಿದ್ದಾರೆ’ ಎಂದರು.

‘ಕಲಬುರಗಿ ಜಿಲ್ಲೆ ಕಾಳಜಿ ಘಟಕದ ಸಾರಿಗೆ ಬಸ್‍ ಡಿಕ್ಕಿ ಹೊಡೆದಿತ್ತು. ಕೆಂಗೇರಿಯಲ್ಲಿ ದುರಸ್ತಿ ಮಾಡಿಸಿ, ಕಲಬುರಗಿಗೆ ಆಗಮಿಸಿ ನಂಬರ್ ಪ್ಲೇಟ್‍ ಹಾಕಿಸಿರುವ ಮಾಹಿತಿ ಆಧರಿಸಿ ವಾಹನ ಜಪ್ತಿ ಮಾಡಲಾಗಿದೆ. ಅಂದು ಕರ್ತವ್ಯದಲ್ಲಿದ್ದ ಇಬ್ಬರು ಚಾಲಕರು, ನಿರ್ವಾಹಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು. ಪೊಲೀಸ್‍ ಇನ್‌ಸ್ಪೆಕ್ಟರ್‌ ಮಹಾಂತೇಶ ಸಜ್ಜನ, ಪಿಎಸ್‍ಐ ಪ್ರಕಾಶ ಡಂಬಳ ನೇತೃತ್ವದಲ್ಲಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಪೊಲೀಸ್‍ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.