ಲಿಂಗಸುಗೂರು: ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪೌರಸೇವಾ ನೌಕರರ ಸಂಘದ ಪಟ್ಟಣ ಶಾಖೆಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಲಾಯಿತು.
ಪೌರಸೇವಾ ನೌಕರರ ಸೇವಾ ಸಂಘದ ಪಟ್ಟಣ ಶಾಖೆಯ ಅಧ್ಯಕ್ಷರಾಗಿ ಶಿವಲಿಂಗ ಮೇಗಳಮನಿ ಮತ್ತು ಉಪಾಧ್ಯಕ್ಷೆಯಾಗಿ ದುರಗಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಂಪಿ ಸನ್ಮಾನಿಸಿದರು.
ಕಚೇರಿ ವ್ಯವಸ್ಥಾಪಕ ಹನುಮಂತ ನಾಯಕ, ಮಂಜುನಾಥ, ಗಿರಿಜಾ, ಮಲ್ಲೇಶ ಮಾಟೂರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.