ADVERTISEMENT

ಲಿಂಗಸುಗೂರು: ಆಟೊ ಮಗುಚಿ 30 ವಿದ್ಯಾರ್ಥಿಗಳಿಗೆ ಗಾಯ

ಆಟೊ ಮಗುಚಿ ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 7:27 IST
Last Updated 18 ನವೆಂಬರ್ 2022, 7:27 IST
   

ಲಿಂಗಸುಗೂರು-ಮಸ್ಕಿ (ರಾಯಚೂರು): ಕುಣಿಕೆಲ್ಲೂರದಿಂದ ಸಂತೆಕೆಲ್ಲೂರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊ ಮಗುಚಿದ್ದು, 30 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

ಸರಕು ಸಾಗಣೆ ಆಟೊದಲ್ಲಿ 40ಕ್ಕು ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದತು. ಈ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಆಟೊ ಪಲ್ಟಿ ಹೊಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹುತೇಕ ಮಕ್ಕಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಪಾಲಕರು, ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣಗೊಂಡಿತ್ತು.

ADVERTISEMENT

ಸಂತೆಕೆಲ್ಲೂರು‌ ಮಟ್ಟೂರು ಮಧ್ಯೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸದೆ ಹೋಗಿದ್ದರಿಂದ ಶಾಲಾ ಮಕ್ಕಳು ಖಾಸಗಿ ವಾಹನದಲ್ಲಿ ಶಾಲಾ ಕಾಲೇಜಿಗೆ ಹೋಗಿ ಬರುವ ಅನಿವಾರ್ಯತೆ ಎದುರಾಗಿದೆ. ಸ್ಥಳೀಯ ಪ್ರತಿನಿಧಿಗಳ ನಿರ್ಲಕ್ಷ್ಯವೆ ಕಾರಣ ಎಂಬುದು ಗ್ರಾಮಸ್ಥರಆರೋಪ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.