ADVERTISEMENT

ಸರ್ಕಾರ ಪತನ ಆಗುವ ಚಾನ್ಸ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:55 IST
Last Updated 27 ಫೆಬ್ರುವರಿ 2026, 6:55 IST
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್   

ರಾಯಚೂರು: ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜಗಳ ಮುಗಿಯುವುದಿಲ್ಲ. ಸರ್ಕಾರ ಪತನ ಆಗೋ ಚಾನ್ಸ್ ಬಹಳ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ದಲಿತರು ಸಿಎಂ ಆಗೋದು ಸಾಧ್ಯವೇ ಇಲ್ಲ. ಮಾಡೋದಿದ್ರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೊದಲೇ ಮಾಡುತ್ತಿದ್ದರು ಎಂದರು.

ಕರ್ನಾಟಕದಲ್ಲಿ ಭ್ರಷ್ಟಾಚಾರ ಬಿಟ್ಟು ಏನಿದೇ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಕಂಟ್ರೋಲ್ ಇಲ್ಲ, ಅಭಿವೃದ್ಧಿಗೆ ಹಣ ಇಲ್ಲ. ಕರ್ನಾಟಕ ಸ್ಥಿತಿ ಕೆಟ್ಟ ಪರಿಸ್ಥಿತಿ ಇದೆ. ಹೀಗೆ ಮುಂದುವರಿದರೆ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲದ ಪರಿಸ್ಥಿತಿ ಬರುತ್ತೆ ಸರ್ಕಾರಕ್ಕೆ ಎಂದು ಹೇಳಿದರು.

ADVERTISEMENT

ಜನರಿಗೆ ಉದ್ಯೋಗ ಕೊಡಬೇಕು, ಉದ್ಯೋಗ ಸೃಷ್ಟಿ ಮಾಡಬೇಕು ಗ್ಯಾರಂಟಿ ಶಾಶ್ವತ ಅಲ್ಲ.ನೀರಾವರಿ ಯೋಜನೆ ತರಬೇಕು, ಕೈಗಾರಿಕೆಗಳನ್ನ ತರಬೇಕು. ಖಾಲಿ ಇರುವ 2 ಲಕ್ಷ 80 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದರೆ ಬಿಪಿಎಲ್‌ ಕಾರ್ಡ್‌ಗಳು ಕಡಿಮೆಯಾಗುತ್ತವೆ. ಉಳಿದ ಬಡಕುಟುಂಬಗಳಿಗೆ ರೇಷನ್ ಕೊಡ್ಲಿ‌ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.