ADVERTISEMENT

ರಾಯಚೂರು: 'ಬಸವಣ್ಣ, ನಾಡಿನ ಸಾಂಸ್ಕೃತಿಕ ನಾಯಕ’

​ಪ್ರಜಾವಾಣಿ ವಾರ್ತೆ
Published 1 ಮೇ 2025, 14:17 IST
Last Updated 1 ಮೇ 2025, 14:17 IST
ರಾಯಚೂರಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಸರ್ವಮಂಗಳ ಸಕ್ರಿ, ಪ್ರತಿಭಾ ಗೋನಾಳ, ವೆಂಕಟೇಶ್ ಬೇವಿನಬೆಂಚಿ, ದಾನಮ್ಮ ಎಸ್., ನಾಗಪ್ಪ ಹೊರಪ್ಯಾಟಿ, ಈರಣ್ಣ ಬೆಂಗಾಲಿ ಪಾಲ್ಗೊಂಡಿದ್ದರು

ರಾಯಚೂರು: 'ಬಸವಣ್ಣ, ನಾಡಿನ ಸಾಂಸ್ಕೃತಿಕ ನಾಯಕ. ಈ ನಾಡಿನ ಸಂಸ್ಕೃತಿಯನ್ನು ಬಸವ ತತ್ವದ ಮೂಲಕ ಅವಲೋಕಿಸಬೇಕಾಗುತ್ತದೆ’ ಎಂದು ಸಾಹಿತಿ ಸರ್ವಮಂಗಳ ಸಕ್ರಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಬಸವಣ್ಣನವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳಾಗುತ್ತಿವೆ. ಅಧ್ಯಯನ ಪೀಠಗಳಾಗುತ್ತಿವೆ. ಸಂಶೋಧನಾತ್ಮಕ ಪ್ರಬಂಧಗಳು ಮಂಡಿಸಲಾಗುತ್ತದೆ, ಇವೆಲ್ಲವುಗಳನ್ನು ಹೊರತುಪಡಿಸಿ ನಾಗರಿಕ ಸಮಾಜದ ನಿರ್ಮಾಣದ ಹಾದಿಯಲ್ಲಿ ಸಾಗುವಂತ ಪ್ರಯತ್ನಗಳು ಆಗಬೇಕು’ ಎಂದು ಹೇಳಿದರು.

ADVERTISEMENT

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು.

ದಾನಮ್ಮ ಎಸ್., ನಾಗಪ್ಪ ಹೊರಪ್ಯಾಟಿ, ಈರಣ್ಣ ಬೆಂಗಾಲಿ, ದಂಡಪ್ಪ ಬಿರಾದಾರ, ರಾವುತರಾವ್ ಬರೂರ, ಪ್ರತಿಭಾ ಗೋನಾಳ, ವಸಂತ್ ಕುಮಾರ್, ರಾಮಣ್ಣ ಬೋಯರ್, ದೇವೇಂದ್ರಮ್ಮ, ಡಾ. ಬಿ. ವಿಜಯರಾಜೇಂದ್ರ, ಮಹೇಶ ಚೀಕಲಪರವಿ, ಕುಮಾರ ಸಂಜಿತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.