ADVERTISEMENT

ಬಸವೇಶ್ವರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:20 IST
Last Updated 1 ಮೇ 2022, 12:20 IST
ಸಿಂಧನೂರಿನ ಬಸವಕೇಂದ್ರದಿಂದ ಶನಿವಾರ ಬೆಳಿಗ್ಗೆ ನಡೆದ ಜಗಜ್ಯೋತಿ ಬಸವೇಶ್ವರ ಅವರ 889ನೇ ಜಯಂತ್ಯೋತ್ಸವ ಪ್ರಯುಕ್ತ ಶರಣ ಸಂಸ್ಕøತಿ ಜಾಗೃತಿ ಪಾದಯಾತ್ರೆಯ ಆತ್ಮಾವಲೋಕನ ಸಭೆಯಲ್ಲಿ ಪಾಟೀಲ್ ಅಕಾಡೆಮಿಯ ಮುಖ್ಯಸ್ಥ ಆರ್.ಸಿ.ಪಾಟೀಲ್ ಮಾತನಾಡಿದರು
ಸಿಂಧನೂರಿನ ಬಸವಕೇಂದ್ರದಿಂದ ಶನಿವಾರ ಬೆಳಿಗ್ಗೆ ನಡೆದ ಜಗಜ್ಯೋತಿ ಬಸವೇಶ್ವರ ಅವರ 889ನೇ ಜಯಂತ್ಯೋತ್ಸವ ಪ್ರಯುಕ್ತ ಶರಣ ಸಂಸ್ಕøತಿ ಜಾಗೃತಿ ಪಾದಯಾತ್ರೆಯ ಆತ್ಮಾವಲೋಕನ ಸಭೆಯಲ್ಲಿ ಪಾಟೀಲ್ ಅಕಾಡೆಮಿಯ ಮುಖ್ಯಸ್ಥ ಆರ್.ಸಿ.ಪಾಟೀಲ್ ಮಾತನಾಡಿದರು   

ಸಿಂಧನೂರು: ಎಲ್ಲರನ್ನು ನಮ್ಮವರೆಂಬ ಭಾವನೆಯಿಂದ ನಮ್ಮ ನಡೆ ಮತ್ತು ನುಡಿಗಳು ಒಂದಾದರೆ ಸೌಹಾರ್ದತೆ ಮತ್ತು ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಪಾಟೀಲ್ ಅಕಾಡೆಮಿಯ ಮುಖ್ಯಸ್ಥ ಆರ್.ಸಿ.ಪಾಟೀಲ್ ಹೇಳಿದರು.

ಜಗಜ್ಯೋತಿ ಬಸವೇಶ್ವರ ಅವರ 889ನೇ ಜಯಂತ್ಯೋತ್ಸವ ಪ್ರಯುಕ್ತ ಶನಿವಾರ ಬೆಳಿಗ್ಗೆ ನಡೆದ ಶರಣ ಸಂಸ್ಕೃತಿ ಜಾಗೃತಿ ಪಾದಯಾತ್ರೆಯ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಮನುಷ್ಯರ ಮನಸ್ಸುಗಳನ್ನು ಕೂಡಿಸುವ ಕೆಲಸ ನಮ್ಮಿಂದಾಗಬೇಕೆ ಹೊರತು ಬೇರ್ಪಡಿಸುವ ಕೆಲಸವಾಗಬಾರದು ಎಂದರು.

ADVERTISEMENT

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಂ.ಪಾಟೀಲ್, ಶಿಕ್ಷಣ ಪ್ರೇಮಿ ಆರ್.ಪಂಪಾಪತೆಪ್ಪ ಅಲಬನೂರು, ಶರಣಬಸವ ವಕೀಲ ವಲ್ಕಂದಿನ್ನಿ, ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಮಾದೇವಿ ಶಂಭೋಜಿ, ತಾಲ್ಲೂಕು ಘಟಕದ ಉಪಾಧ್ಯಕ್ಷೆ ಬಸಮ್ಮ ತಾಳಿಕೋಟಿ, ಕನ್ನಡ ಜಾನಪದ ಪರಿಷತ್ ಸದಸ್ಯೆ ಅನ್ನಪೂರ್ಣ ಹೇಮವಾಡಗಿ, ಸಂಗೀತ ಶಿಕ್ಷಕ ದೇವಣ್ಣ ಹೂಗಾರ ಇದ್ದರು.

ಪಾದಯಾತ್ರೆಗೆ ಚಾಲನೆ: ಬೆಳಿಗ್ಗೆ 6 ಗಂಟೆಗೆ ಸುಕಾಲಪೇಟೆಯ ಬನ್ನಿ ಮಹಾಂಕಾಳಿ ಕಟ್ಟೆಯ ಹತ್ತಿರ ನಗರಸಭೆ ಉಪಾಧ್ಯಕ್ಷ ಮುರ್ತುಜಾಹುಸೇನ್ ಹಾಗೂ ಸದಸ್ಯ ಮುನೀರ್‍ಪಾಷಾ ಅವರು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಬಸವ ಕೆಂದ್ರ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಎಂ.ಭಾಸ್ಕರ್, ಬೀರಪ್ಪ ಶಂಭೋಜಿ, ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷ ಹುಸೇನ್‍ಸಾಬ್, ಚೆನ್ನನಗೌಡ ಮೇಟಿ, ವೆಂಕನಗೌಡ ವಟಗಲ್, ರಮಾದೇವಿ ಶಂಭೋಜಿ, ನಾಗಭೂಷಣ ನವಲಿ, ಸಿದ್ರಾಮಪ್ಪ ಸಾಹುಕಾರ ಮಾಡಶಿರವಾರ, ಶರಣಪ್ಪ ತೆಂಗಿನಕಾಯಿ, ವೀರಭದ್ರಗೌಡ ಅಮರಾಪುರ, ಹೆಚ್.ಬಸವರಾಜ ವಕೀಲ, ಶರಣಬಸವ ನಟೇಕಲ್, ಬಸವಲಿಂಗಪ್ಪ ಬಾದರ್ಲಿ, ಕರೇಗೌಡ ಕುರುಕುಂದಿ, ಮಹಾದೇವಪ್ಪ ಗೋರೆಬಾಳ, ಶಾಂತಪ್ಪ ಚಿಂಚರಕಿ, ಅಮರೇಶ ಗುರಿಕಾರ, ನಾರಾಯಣಪ್ಪ ಮಾಡಶಿರವಾರ, ಚಾಂದಪಾಷಾ, ಹೆಚ್.ಎಫ್.ಮಸ್ಕಿ, ಜಯಶ್ರೀ ಪತ್ತಾರ, ಶಿಕ್ಷಕ ಹನುಮಂತ ಬೇರಗಿ, ಶರಣಬಸವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.