ADVERTISEMENT

‘ಭಗತ್‌ಸಿಂಗ್ ದೇಶ ಕಂಡ ಅಪ್ರತಿಮ ಹೋರಾಟಗಾರ’ ; ವೆಂಕಟೇಶ ಬೇವಿನಬೆಂಚಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:57 IST
Last Updated 29 ಸೆಪ್ಟೆಂಬರ್ 2025, 4:57 IST
ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವೆಂಕಟೇಶ ಬೇವಿನಬೆಂಚಿ, ವಿ.ಜಿ.ಬಾವಲತ್ತಿ, ಬಂಡೇಶ್ ವಾಲ್ಕ್ಮದಿನ್ನಿ, ವಿನಾಯಕ ಚಲವಾದಿ, ಗೌತಮ ಪಾಲ್ಗೊಂಡಿದ್ದರು
ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವೆಂಕಟೇಶ ಬೇವಿನಬೆಂಚಿ, ವಿ.ಜಿ.ಬಾವಲತ್ತಿ, ಬಂಡೇಶ್ ವಾಲ್ಕ್ಮದಿನ್ನಿ, ವಿನಾಯಕ ಚಲವಾದಿ, ಗೌತಮ ಪಾಲ್ಗೊಂಡಿದ್ದರು   

ರಾಯಚೂರು: ‘ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ವೀರ ಮರಣವನ್ನಪ್ಪಿದ ಕ್ರಾಂತಿವೀರ ಭಗತ್‌ಸಿಂಗ್ ಅವರನ್ನು ನೆನಪು ಮಾಡಿಕೊಳ್ಳುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ’ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಹೇಳಿದರು.

ನಗರದ ಐಡಿಎಸ್ಎಂಟಿ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಭಗತ್‌ಸಿಂಗ್ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

‘ವ್ಯಕ್ತಿಗಳನ್ನು ಕೊಲ್ಲುವುದು ಸುಲಭ. ಆದರೆ, ಅವರ ಚಿಂತನೆಗಳನ್ನು ಕೊಲ್ಲಲು ಆಗುವುದಿಲ್ಲ. ಬೃಹತ್ ಸಾಮ್ರಾಜ್ಯಗಳು ಉರುಳಿ ಹೋಗಿವೆ. ಆದರೆ, ಚಿಂತನೆಗಳು ಬದುಕುಳಿದಿವೆ. ಭಗತ್ ಸಿಂಗ್‌ ಅವರ ಚಿಂತನೆಗಳು ಯುವಕರಿಗೆ ಸ್ಪೂರ್ತಿದಾಯಕವಾಗಿವೆ’ ಎಂದು ಹೇಳಿದರು.

ADVERTISEMENT

ಮತ್ತೊಬ್ಬ ಮುಖ್ಯ ಅತಿಥಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ವಿ.ಜಿ.ಬಾವಲತ್ತಿ ಮಾತನಾಡಿ,‘ ಈ ದಿನ ಯುವಕರಿಗೆ ಭಗತ್ ಸಿಂಗ್ ಅವರ ಕುರಿತು ಚಿಂತನೆಗಳನ್ನು ಕೊಡುವ ಕಾರ್ಯಕ್ರಮವನ್ನು ವಿನಯ್ ಮತ್ತು ಅವರ ತಂಡ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಬಂಡೇಶ್ ವಾಲ್ಕ್ಮದಿನ್ನಿ ಮಾತಾಡಿದರು. ಈ ಸಂದರ್ಭದಲ್ಲಿ ಯುವಕ ತಂಡದ ವತಿಯಿಂದ ಸಸಿಗಳನ್ನು ನೆಡಲಾಯಿತು. ಭಗತ್‌ಸಿಂಗ್ ಯುವಕ ಸಂಘದ ಪದಾಧಿಕಾರಿಗಳಾದ ವಿನಾಯಕ ಚಲವಾದಿ, ಗೌತಮ, ಉಮೇಶ ಗೋಪಿ ಹಾಗೂ ನರೇಂದ್ರ ಪಾಲ್ಗೊಂಡಿದ್ದರು.

ರಾಯಚೂರಿನ ಶಹೀದ್ ಭಗತ್ ಸಿಂಗ್ ವೃತ್ತದಲ್ಲಿ ಎಐಡಿಎಸ್ಒ ಎಐಡಿವೈಒ ಹಾಗೂ ಎಐಐಎಂಎಸ್ಎಸ್ ಸಂಘಟನೆಗಳು ಜಂಟಿಯಾಗಿ ಭಗತ್ ಸಿಂಗ್ ಜನ್ಮದಿನ ಆಚರಿಸಿದವು

ಎಐಡಿವೈಒಯಿಂದ ಆಚರಣೆ ‘ಎಲ್ಲ ಮಾನವರು ಸಮಾನರು ಹಾಗೂ ದುಡಿಮೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಲು ಭಗತ್ ಸಿಂಗ್ ವಿಚಾರಗಳು ಸ್ಫೂರ್ತಿ ನೀಡುತ್ತವೆ’ ಎಂದು ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು. ನಗರದ ಶಹೀದ್ ಭಗತ್ ಸಿಂಗ್ ವೃತ್ತದಲ್ಲಿ ಎಐಡಿಎಸ್ಒ ಎಐಡಿವೈಒ ಹಾಗೂ ಎಐಐಎಂಎಸ್ಎಸ್ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡ ಭಗತ್ ಸಿಂಗ್ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಐಡಿಎಸ್ಒ ಮುಖಂಡ ಹಯ್ಯಾಳಪ್ಪ ಮಾತನಾಡಿದರು. ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ಜಿಲ್ಲಾ ಕಾರ್ಯದರ್ಶಿ ಮಹೇಶ್ ಚೀಕಲಪರವಿ ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ ನಂದಗೋಪಾಲ್ ಶ್ರೀಕಾಂತ ಮೌನೇಶ ನೂರ್ ಪಾಷಾ ಕೃಷ್ಣ ಮನ್ಸಲಾಪುರ ನಾಗವೇಣಿ ಶ್ರೀಕಾಂತ ರಾಜೇಶ ಮಲ್ಲನಗೌಡ ಅವರು ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ಎಐಐಎಂಎಸ್ಎಸ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸರೋಜಾ ಗೋವಾರ್ ಕಾರ್ಯಕ್ರಮ ನಿರೂಪಿಸಿದರು. ಮನಸಲಾಪುರ ಗ್ರಾಮದಲ್ಲಿ ಎಐಡಿವೈಒ ಗ್ರಾಮ ಘಟಕದ ವತಿಯಿಂದ ವಾಲ್ಮೀಕಿ ವೃತ್ತದಲ್ಲಿ ಭಗತ್ ಸಿಂಗ್ ಜನ್ಮದಿನ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.