ಕವಿತಾಳ: ಹದಗೆಟ್ಟ ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ವಾಹನ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತದ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಸಂಘಟನೆ ಮುಖಂಡರು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿದರು.
‘ವರ್ಷ ಕಳೆದರೂ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿಲ್ಲ, ವಾಹನ ಸವಾರರು ನಿತ್ಯ ತಗ್ಗುಗಳಲ್ಲಿ ಬೀಳುತ್ತಿದ್ದಾರೆ. ಕಾಮಗಾರಿ ವಿಳಂಬದ ಮೂಲಕ ಹಣ ದುರುಪಯೋಗ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಶೀಘ್ರ ಕಾಮಗಾರಿ ಆರಂಭಿಸಬೇಕು ಮತ್ತು ತಾತ್ಕಾಲಿಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಭೀಮ್ ಆರ್ಮಿ ಹೋಬಳಿ ಘಟಕದ ಅಧ್ಯಕ್ಷ ಅಜಪ್ಪ ಬುಳ್ಳಾಪುರ ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಹುಚ್ಚಪ್ಪ ಬುಳ್ಳಾಪುರ, ಮೆಹಬೂಬ್ ಗಣಿದಿನ್ನಿ, ಲಾಳ್ಳೆಪ್ಪ ಜಾಲಹಳ್ಳಿ, ಖಾಜಾಪಾಶಾ, ಶಂಕರ, ನಾಗರಾಜ, ಮಲ್ಲಿಕಾರ್ಜುನ ಬುಳ್ಳಾಪುರ, ಮೌನೇಶ ಬಳ್ಳಾಪುರ, ಹನುಮೇಶ ಕೆಳಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಯಲ್ಲಮ್ಮ ತೆಲಗರ್, ಗೌರಮ್ಮ ಕೆಳಗೇರಿ, ದುರ್ಗಮ್ಮ ಬುಳ್ಳಾಪುರ, ಚಿನ್ನಮ್ಮ ಮ್ಯಾಗಳಮನಿ, ಲಕ್ಷ್ಮಿ ಬುಳ್ಳಾಪುರ, ಮರಿಯಮ್ಮ, ಮುತ್ತಮ್ಮ ಬುಳ್ಳಾಪುರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.