ADVERTISEMENT

105 ಬೈಕ್‌ ಜಪ್ತಿ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 9:55 IST
Last Updated 27 ಮಾರ್ಚ್ 2020, 9:55 IST
ಡಾ.ಸಿ.ಬಿ.ವೇದಮೂರ್ತಿ
ಡಾ.ಸಿ.ಬಿ.ವೇದಮೂರ್ತಿ   

ರಾಯಚೂರು: ಕೊರೊನಾವೈರಸ್ ಸೋಂಕನ್ನು ತಡೆಗಟ್ಟುವ ನಿಮಿತ್ತ ಈಗಾಗಲೇ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘನೆ ಮಾಡಿ, ವಿನಾಕಾರಣ ರಸ್ತೆಯ ಮೇಲೆ ತಿರುಗಾಡುವವರ ಮೋಟಾರು ಸೈಕಲ್‌ ವಾಹನಗಳನ್ನು ಜಪ್ತಿ ಮಾಡಿ ಠಾಣೆಯಲ್ಲಿ ಇಡಲಾಗುವದು. ಯಾವುದೇ ಕಾರಣಕ್ಕೂ ಏಪ್ರಿಲ್ 14 ನೇ ತಾರೀಖಿನವರೆಗೆ ವಾಹನಗಳನ್ನು ಹಸ್ತಾಂತರಿಸುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ವಾಹನ ಸವಾರರನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಒಂದೆಡೆ ಸೇರಿಸಿ ರಾತ್ರಿವರೆಗೂ ಇಟ್ಟುಕೊಂಡು ನಂತರ ಲಘು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಯಾರೂ ಇಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡದೆ ಅತಿ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗಡೆ ಬನ್ನಿ ಎಂದು ಬುದ್ಧಿವಾದ ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಕಾರ್ಯಾಚರಣೆ ಕೈಗೊಂಡು ಒಟ್ಟು 105 ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 85 ಜನರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಲಾಗಿದೆ. ಹಾಗಾಗಿಜಿಲ್ಲೆಯ ಸಾರ್ವಜನಿಕರು ಏಪ್ರಿಲ್ 14 ನೇ ತಾರೀಖಿನವರೆಗೂ ಮನೆಯಲ್ಲಿಯೇ ಇದ್ದು ಸಹಕರಿಸಬೇಕು ಎಂದು ಕೋರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.