
ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.4ರ ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ 22 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸೋಮವಾರ ನಡೆದ ಉಪಚುನಾವಣೆಯಲ್ಲಿ 735 ಜನರು ಮತ ಚಲಾಯಿಸಿದ್ದರು. ಈ ಪೈಕಿ ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಬೆಳ್ಳಿ 376, ಕಾಂಗ್ರೆಸ್ ಅಭ್ಯರ್ಥಿ ಬಾಲಾಜಿ ಮಡಿವಾಳ 354 ಮತ ಪಡೆದಿದ್ದು, 5 ನೋಟಾ ಮತ ಚಲಾವಣೆ ಆಗಿವೆ. ಹೀಗಾಗಿ 22 ಮತಗಳಿಂದ ಮುನಿಯಪ್ಪ ಬೆಳ್ಳಿ ಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಗದ್ದಪ್ಪ ಹಾಗೂ ಸಹಾಯಕ ಚುನಾವಣಾಧಿಕಾರಿ ಸತೀಶ್‍ಕುಮಾರ ಎಡಿ ಘೋಷಿಸಿದರು.
ಈ ವೇಳೆ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ‘ಕಾಂಗ್ರೆಸ್‍ನ ದುರಾಡಳಿತದಿಂದ ಸಾರ್ವಜನಿಕರು ಬೇಸೆತ್ತಿದ್ದಾರೆ’ ಎಂದರು.
ನಂತರ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ,‘ನಾಲ್ಕನೇ ವಾರ್ಡಿನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿರುವುದು ಮುಂದಿನ 2028ರ ಚುನಾವಣೆಯಲ್ಲಿ ಬಿಜೆಪಿಯು ಪಟ್ಟಣ, ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕ ಸ್ಥಾನದಲ್ಲಿ ಜಯಭೇರಿ ಭಾರಿಸಿ ಅಧಿಕಾರಕ್ಕೆ ಬರಲಿದೆ ಎನ್ನುವುದಕ್ಕೆ ಮುನ್ಸೂಚನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ವಿಜಯೋತ್ಸವ: ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ 101 ಕಾಯಿಗಳನ್ನು ಹೊಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಖಂಡರಾದ ಪ್ರಸನ್ನ ಪಾಟೀಲ್, ಬಸವರಾಜಸ್ವಾಮಿ ಹಸಮಕಲ್, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸ್ವಾಮಿ ಸೊಪ್ಪಿನಮಠ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಕಾಂತ ಗೂಗೇಬಾಳ, ಮೌನೇಶ ನಾಯಕ ಮಸ್ಕಿ, ಕರಕಪ್ಪ ಸಾಹುಕಾರ, ಸಿದ್ದೇಶ್ವರ ಗುರಿಕಾರ ವಕೀಲ, ದುರ್ಗೇಶ್ ವಕೀಲ, ಚನ್ನಬಸವ ದೇಸಾಯಿ, ಬಾಲಪ್ಪ ಕುಂಟೋಜಿ, ಕರಿಯಪ್ಪ ಭಂಗಿ, ಯಂಕಣ್ಣ ಉಪ್ಪಾರ, ಶಿವಮಣಿ, ನಿರುಪಾದಿ ಉಪ್ಪಲದೊಡ್ಡಿ, ಚಂದ್ರು ಪವಾಡಶೆಟ್ಟಿ, ಮರಿಸ್ವಾಮಿ ಬುದ್ದಿನ್ನಿ, ನಾಗರಾಜ ತೆಕ್ಕಲ ಕೋಟೆ, ಬಸವರಾಜ ಇಟ್ಲಾಪುರ, ಶರಣಬಸವ ವಕೀಲ ಉಮಲೂಟಿ, ದಾವಲ್‍ಸಾಬ್ ಮುಜೇವಾರ, ಮೌಲಸಾಬ್ ಹವಾಲ್ದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.