ADVERTISEMENT

ಬ್ಲುಟೂಥ್‌ ರೊಬೊಟಿಕ್ಸ್‌ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 13:23 IST
Last Updated 6 ನವೆಂಬರ್ 2019, 13:23 IST
ರಾಯಚೂರಿನ ನವೋದಯ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಬುಧವಾರದಿಂದ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೆಹಲಿ ರೋಬೋಸ್ಯಾಪಿಯನ್ಸ್ ಸಂಶೋಧನಾ ವಿಭಾಗದ ಎಂಜಿನಿಯರ್ ಸೂಯೋಗ್ ಸಾವರ್ಡೆಕರ್‌ ಮಾತನಾಡಿದರು
ರಾಯಚೂರಿನ ನವೋದಯ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಬುಧವಾರದಿಂದ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೆಹಲಿ ರೋಬೋಸ್ಯಾಪಿಯನ್ಸ್ ಸಂಶೋಧನಾ ವಿಭಾಗದ ಎಂಜಿನಿಯರ್ ಸೂಯೋಗ್ ಸಾವರ್ಡೆಕರ್‌ ಮಾತನಾಡಿದರು   

ರಾಯಚೂರು: ನಗರದ ನವೋದಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಬ್ಲೂಟೂಥ್ ರೊಬೊಟಿಕ್ಸ್‌ ಎರಡು ದಿನಗಳ ರಾಷ್ಟ್ರಮಟ್ಟದ ತಂತ್ರಜ್ಞಾನ ವಿಷಯಾಧಾರಿತ ಕಾರ್ಯಾಗಾರ ಬುಧವಾರ ಆರಂಭವಾಯಿತು.

ದೆಹಲಿ ರೋಬೋಸ್ಯಾಪಿಯನ್ಸ್ ಸಂಶೋಧನಾ ವಿಭಾಗದ ಎಂಜಿನಿಯರ್ ಸೂಯೋಗ್ ಸಾವರ್ಡೆಕರ್,ರೋಬೋಟಿಕ್ಸ್ ತಂತ್ರಜ್ಞಾನ ಸಂಪೂರ್ಣ ಮಾಹಿತಿ ನೀಡಿದರು.

ಬ್ಲೂಟೂಥ್ ರೊಬೊಟಿಕ್ಸ್ ಸಂಶೋಧನೆಯಲ್ಲಾದ ಬೆಳವಣಿಗೆಗಳು. ಅದರ ಉಪಯೋಗಗಳು ಹಾಗೂ ಅಧ್ಯಯನ ವಿಧಾನಗಳು ಮಾಹಿತಿ ನೀಡಿದರು.

ADVERTISEMENT

ರೊಬೊಟಿಕ್ಸ್ ಮತ್ತು ಮೈಕ್ರೊ ಕಂಟ್ರೋಲರ್ ಹಾಗೂ ಉನ್ನತ ಪ್ರೋಗ್ರಾಮಿಂಗ್ ವಿಷಯಗಳು. ರೊಬೊಟಿಕ್ಸ್ ಪ್ರಯೋಗದ ಯೋಜನೆಗಳನ್ನು ಕಾರ್ಯರೂಪಕ್ಕೆ ಸಂಶೋಧನಾ ವಿಚಾರದಲ್ಲಿ ಸಹಾಯವಾಗುವ ಅಂಶಗಳ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವಿ ಮಲ್ಲಿಕಾರ್ಜುನ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಜೀವನ ಹಾಗೂ ರೊಬೊಟಿಕ್ಸ್ ಉಪಯೋಗಗಳ ಬೆಳವಣಿಗೆ ಮತ್ತು ಸಂಬಂಧ ಪ್ರಯೋಜನಕಾರಿ ಕುರಿತು ಹೇಳಿದರು.

ನವೋದಯ ಶಿಕ್ಷಣ ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ, ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.