ADVERTISEMENT

ರಾಯಚೂರಿಗೆ ತಲುಪಿದ 37 ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 4 ಮೇ 2020, 14:17 IST
Last Updated 4 ಮೇ 2020, 14:17 IST
ಬೆಂಗಳೂರಿನಿಂದ ರಾಯಚೂರಿಗೆ ಭಾನುವಾರ ತಡರಾತ್ರಿ ಸರ್ಕಾರಿ ಬಸ್‌ಗಳಲ್ಲಿ ಮರಳಿದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು
ಬೆಂಗಳೂರಿನಿಂದ ರಾಯಚೂರಿಗೆ ಭಾನುವಾರ ತಡರಾತ್ರಿ ಸರ್ಕಾರಿ ಬಸ್‌ಗಳಲ್ಲಿ ಮರಳಿದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು   

ರಾಯಚೂರು:ಜಿಲ್ಲೆಯಿಂದ ಬೆಂಗಳೂರಿಗೆ ದುಡಿಯುವುದಕ್ಕಾಗಿ ಹೋಗಿದ್ದ ಕಾರ್ಮಿಕರನ್ನು 37 ಸರ್ಕಾರಿ ಬಸ್‌ಗಳ ಮೂಲಕ ಭಾನುವಾರ ತಡರಾತ್ರಿ ರಾಯಚೂರಿಗೆ ಕರೆತರಲಾಯಿತು. ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸ್ವಗ್ರಾಮಗಳಿಗೆ ತಲುಪಿಸಲಾಯಿತು.

ಸ್ವಗ್ರಾಮಕ್ಕೆ ಕಳುಹಿಸುವ ಪೂರ್ವದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಸ್‌ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಂಬಂಧಿಗಳ ಮನೆಗಳಿಂದ ವಾಪಸ್ಸಾದವರು ಇದ್ದರು. ಮುಂದಿನ 14 ದಿನಗಳವರೆಗೆ ಮನೆಗಳಲ್ಲಿ ಕ್ವಾರಂಟೈನ್‌ ಆಗಿರಬೇಕು ಎಂದು ಅಧಿಕಾರಿಗಳು ಎಲ್ಲರಿಗೂ ಮನವರಿಕೆ ಮಾಡಿದರು.

ಉಪವಿಭಾಗಾಧಿಕಾರಿ ಸಂತೋಷ ಎಸ್‌.ಕೆ., ತಹಶೀಲ್ದಾರ್‌ ಹಂಪಣ್ಣ, ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.