ಸಿಂಧನೂರು: ನಗರದ ವಾರ್ಡ್ ಸಂಖ್ಯೆ–22ರ ನಗರಸಭೆ ಸದಸ್ಯ ಮುನೀರ್‌ಪಾಷಾ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸಿದರು.
ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ನೇತೃತ್ವದಲ್ಲಿ ವಾರ್ಡ್ ಸಂಖ್ಯೆ–22 ರಲ್ಲಿ ಮನೆ-ಮನೆಗೆ ತೆರಳಿ ಕರಪತ್ರ ನೀಡಿ ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಮುನೀರ್‌ಪಾಷಾ ಪರ ಮತಯಾಚನೆ ಮಾಡಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಸೈಯ್ಯದ್ ಜಾಫರ್ ಅಲಿ ಜಾಗೀರದಾರ್, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಸದಸ್ಯರಾದ ಶೇಖರಪ್ಪ ಗಿಣಿವಾರ, ಎಚ್.ಬಾಷಾ, ಮುಖಂಡರಾದ ಪ್ರಭುರಾಜ, ಸುರೇಶ ಜಾಧವ, ಮೈನುದ್ದೀನ್, ಮಹಿಬೂಬ್ ಡೋಂಗ್ರಿ ಹಾಗೂ ರಹೀಮ್ ಭಾಗವಹಿಸಿದ್ದರು.
ಬಿಜೆಪಿ ಪಕ್ಷದ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ಮನೆ-ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಕಾಟಗಲ್ ಪರವಾಗಿ ಮತಯಾಚನೆ ಮಾಡಲಾಯಿತು. ಮುಖಂಡರಾದ ಈರೇಶ ಇಲ್ಲೂರು ಹಾಗೂ ಮಂಜುನಾಥ ಗಾಣಗೇರಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.